Hosakote: ಫಲಾನುಭವಿಗಳಿ ಸವಲತ್ತುಗಳನ್ನ ವಿತರಣೆ ಮಾಡಿದ ಶಾಸಕ ಶರತ್ ಬಚ್ಚೇಗೌಡ.

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್​​.ಎ

4/12/20251 min read

ಹೊಸಕೋಟೆ: ತಾಲ್ಲೂಕು ಪಂಚಾಯಿತಿ ಮತ್ತು ಕೈಗಾರಿಕೆ ಹಾಗೂ ವಿವಿಧ ಇಲಾಖೆಗಳಾದ ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಹಾಗೂ ರೇಷ್ಮೆ ಇಲಾಖೆಗಳ ಸಹಯೋಗದೊಂದಿಗೆ. ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಹಾಗೂ ಕುಶಲ ಕಾರ್ಮಿಕರಿಗೆ ಕಿಟ್ ವಿತರಣೆ ಹಾಗೂ ಇತರೆ ಇಲಾಖೆಗಳ ವಿವಿಧ ಸವತ್ತುಗಳ ವಿತರಣಾ ಕಾರ್ಯಕ್ರಮವನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ 256 ಫಲಾನುಭವಿಗಳಿಗೆ 97.10 ಲಕ್ಷ ವೆಚ್ಚದ ವಿವಿಧ ಸವಲತ್ತುಗಳನ್ನು ಕಿಯೋನಿಕ್ಸ್ ಅಧ್ಯಕ್ಷರಾದ ಶಾಸಕ ಶರತ್ ಬಚ್ಚೇಗೌಡರವರು ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ದೀಪ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ತಾಲ್ಲೂಕುಗಳಲ್ಲಿ ಈ ತರಹದ ಅದ್ಭುತ ಕಾರ್ಯ ಮಾಡಿಲ್ಲ ವಿಕಲಚೇತರನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ, ಹೊಸಕೋಟೆ ತಾಲ್ಲೂಕು ಪಂಚಾತಿಯ 11 ಫಲಾನುಭವಿಗಳಿಗೆ ತ್ರಿಚಕ್ರ ವಾಹನ ನೀಡಲಾಗಿದೆ,ಒಂದು ತ್ರೀಚಕ್ರ ವಾಹನಕ್ಕೆ 1 ಲಕ್ಷ 10 ಸಾವಿರ ವೆಚ್ಚ ತಗಲಿದೆ ಎಂದರು. ಕೈಗಾರಿಕಾ ಇಲಾಖೆಯಿಂದ 150 ಫಲಾನುಭವಿಗಳಿಗೆ ಕಾರ್ಮಿಕ ಕಿಟ್ ವಿತರಣೆ, ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 50 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ತೋಟಗಾರಿಕೆ ಇಲಾಖೆಯು 25 ಫಲಾನುಭವಿಗಳಿಗೆ ಸೀಡ್ ಕಿಟ್ ಗಳ ವಿತರಣೆ, ರೇಷ್ಮೇ ಇಲಾಖೆಯ 16 ಫಲಾನುಭವಿಗಳಿಗೆ ಡ್ರಿಪ್, ಸೋಂಕು ನಿವಾರಕ ಆರ್ ಹೆಚ್ ವಿತರಣೆ, ಕೃಷಿ ಇಲಾಖೆಯ 4 ಫಲಾನುಭವಿಗಳಿಗೆ ಮ್ಯಾಟ್ ಗಳ ವಿತರಣೆ ಮಾಡಲಾಗಿದೆ ಎಂದರು.

ಜನ ಸಾಮಾನ್ಯರು ಸಮಾಜಮುಖಿ ಬದುಕು ಕಟ್ಟಿಕೊಳ್ಳಲು ಜನಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದೆ. ದೀನ ದಲಿತ, ಹಿಂದುಳಿದ ಕುಟುಂಬಗಳ ಆರ್ಥಿಕ ಸಬಲೀಕರಣ ನಮ್ಮ ಮುಖ್ಯ ಗುರಿಯಾಗಿದೆ. ಫಲಾನುಭವಿಗಳು ತಮಗೆ ವಿತರಿಸಿದ ಸಾಮಗ್ರಿಗಳ ಸಬ್ದಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಂಚಾಯತಿ ಕಾರ್ಯನಿರ್ವಾಹಕ ಡಾ.ಸಿ.ಎನ್.ನಾರಾಯಣಸ್ವಾಮಿ,ಬಿಎಂಆರ್‌ಡಿ ಅಧ್ಯಕ್ಷ ಕೇಶವಮೂರ್ತಿ ಸದಸ್ಯರಾದ ಡಾ.ಸುಬ್ಬರಾಜು, ಸುರೇಶ್, ಸಿಡಿಪಿಓ ಶಿವಮ್ಮ,ಬಿಇಓ ಪದ್ಮನಾಬ್,ಕಾರ್ಮಿಕ ಇಲಾಖೆಯ ಹೆಚ್.ಎಂ ಚಂದ್ರೇಗೌಡ, ಕೈಗಾರಿಕೆ ‌ಇಲಾಖೆಯ ಶ್ರೀಕಾಂತ್,ನವಾಜ್,ಬಿ.ಟಿ ವಿಶ್ವನಾಥ್,ಹೇಮಾದೇವಿ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳು ಫಲಾನುಭವಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.