ಘಾಟಿ ದೇವಾಲಯದಲ್ಲಿ ಹುಂಡಿ ಎಣಿಕೆ, 60 ಲಕ್ಷಕ್ಕು ಹೆಚ್ಚು ಹಣ ಸಂಗ್ರಹ
ಜಿಲ್ಲಾ ಸುದ್ದಿ


ದೊಡ್ಡಬಳ್ಳಾಪುರ: ತಾಲ್ಲೂಕಿನ ಪ್ರಸಿದ್ದ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಒಟ್ಟು 61 ಲಕ್ಷದ 98 ಸಾವಿರದ 741 ರೂಪಯಿಗಳ ಮೊತ್ತ ಸಂಗ್ರಹವಾಗಿದೆ.
ದೇವಾಲಯದ ಆವರಣದಲ್ಲಿ ಇಂದು ದೇವಾಲಯದ ಕಾರ್ಯದರ್ಶಿ ಪಿ. ದಿನೇಶ್ ನೇತೃತ್ವದಲ್ಲಿ ಭಕ್ತಾದಿಗಳಿಂದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ಒಟ್ಟು 61,98,741 ರೂಪಾಯಿಗಳು ಮತ್ತು 3.40 ಲಕ್ಷ ಬೆಲೆ ಬಾಳುವ ಬೆಳ್ಳಿ ಹಾಗೂ 80 ಸಾವಿರ ಬೆಲೆ ಬಾಳುವ 11 ಗ್ರಾಂ ಚಿನ್ನ ಸಂಹ್ರಹವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಈ ವೇಳೆ ಉಪ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಸಿಲ್ದಾರ್ ಜಿ.ಜೆ .ಹೇಮಾವತಿ, ಪ್ರಧಾನ ಅರ್ಚಕರು ಶ್ರೀನಿಧಿ, ದೇವಾಲಯದ ನಂಜಪ್ಪ, ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಜೆ.ಎನ್. ರಂಗಪ್ಪ, ಎಸ್. ರವಿ ಲಕ್ಷ್ಮ ನಾಯಕ್ ಆರ್. ವಿ. ಮಹೇಶ್ ಕುಮಾರ್ ಶ್ರೀಮತಿ ಹೇಮಲತಾ ರಮೇಶ್ ಪೊಲೀಸ್ ಇಲಾಖೆ ಸಿಬ್ಬಂದಿ ದೇವಾಲಯದ ಸಿಬ್ಬಂದಿ .ಕೆನರಾ ಬ್ಯಾಂಕ್ ಸಿಬ್ಬಂದಿ ಇದ್ದರು.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK