ಸರ್ಕಾರಿ ಜಮೀನು ಸಾಬ್ರ ಹೆಸರಿಗೆ ಮಾಡಿದ್ರೆ ನೇಣಿಗೆ ಹಾಕ್ತೀನಿ. ಕಾಂಗ್ರೆಸ್ ಶಾಸಕ ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ.
ಜಿಲ್ಲಾ ಸುದ್ದಿ


ಮಂಡ್ಯ:ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ಲಂಚ ಪಡೆದ ವಿಚಾರ ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ.ಕಾಂಗ್ರೆಸ್ ನಾಯಕರೇ ರಾಜಿನಾಮೆಗೆ ನೀಡಬೇಕು ಎಂದು ಎದ್ದಿದ್ದಾರೆ.ಈ ಹಿನ್ನಲೆಯಲ್ಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾದಂತಹ ರಮೇಶ್ ಬಂಡಿಸಿದ್ದೇಗೌಡ ಮುಸ್ಲಿಂರ ಬಗ್ಗೆ ಅಧಿಕಾರಿಗಳಿಗೆ ಕಡಕ್ ಎಚ್ಚರಿಕೆ ನೀಡಿರುವ ಒಂದು ಆಡಿಯೋ ವೈರಲ್ ಆಗಿದೆ.
ಮಂಡ್ಯದ ಮಹದೇವಪುರ ಗ್ರಾಮದಲ್ಲಿ ಸಾರ್ವಜನಿಕ ಸಭೆ ವೇಳೆ ಮಾತನಾಡಿದ ಶಾಸಕರು, ಸರ್ಕಾರಿ ಜಮೀನು ಮೇಲೆ ಬಗರ್ ಹುಕ್ಕುಂ ಅರ್ಜಿ ಹಾಕಿ ಸುಳ್ಳು ದಾಖಲಾತಿಗಳ ಮೂಲಕ ಖಾತೆ ಮಾಡಿಸಲು ಪ್ರಯತ್ನ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಬ್ರು ಹೆಸರಿಗೆ ನೊಂದಣಿ ಮಾಡದಂತೆ ಜನರ ಮುಂದೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಸುಳ್ಳು ದಾಖಲೆ ಮೂಲಕ ಖಾತೆ ಮಾಡಿದ್ರೆ ಬಿಡಲ್ಲ ಎಂದು ಶಾಸಕರು ಖಡಕ್ ಎಚ್ಚರಿಕೆ ನೀಡಿದರು. ಇದುವರೆಗೂ ಮುಸ್ಲಿಂರ ಪರ ಇದ್ದ ಶಾಸಕ ಇದೀಗ ಸಾಬ್ರು ಎಂದು ಉಲ್ಟಾ ಹೊಡೆದಿದ್ದಾರೆ. ಬಂಡಿಸಿದ್ದೇಗೌಡರ ಈ ಒಂದು ಹೇಳಿಕೆ ಸಾರ್ವಜನಿಕವಾಗಿ ಪರ ಹಾಗೂ ವಿರೋಧಗಳು ವ್ಯಕ್ತವಾಗುತ್ತಿದೆ.