Independence day : ವೀರಯೋಧರ ಜೀವನ ಸ್ಫೂರ್ತಿಯಾಗಲಿ : ಬಿ.ಎಸ್.ಮಧುಕುಮಾರ್

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/16/20251 min read

ಮಹದೇವಪುರ:- ದೇಶದ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಹೋರಾಟ ಮಾ ಡಿದ ಎಲ್ಲಾ ವೀರಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಎಂದು ನಿಕಟಪೂರ್ವ ಭೂನ್ಯಾಯಮಂಡಳಿ ಸದಸ್ಯ ಬಿ.ಎಸ್.ಮಧುಕುಮಾರ್ ಅವರು ತಿಳಿಸಿದರು .

ಮಹದೇವಪುರ ಕ್ಷೇತ್ರದ ಬಿದರಹಳ್ಳಿಯ ಚನ್ನಕೇಶವ ಫ್ರೌಡ ಶಾಲೆಯಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೇರವೇರಿಸಿ, ರಾಷ್ಟ್ರಪಿತ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ನಾಡಿನ ರಾಜರು, ವೀರಯೋಧರ ಜೀವನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ. ವಿದ್ಯಾರ್ಥಿಗಳು ದೇಶದ ಇತಿಹಾಸ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಭಾರತ ದೇಶದ ಸಂಭ್ರಮಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ.ಅದೆಷ್ಟೋ ಸಾವು ನೋವುಗಳ ಪ್ರತೀಕವಾಗಿ ಸಿಕ್ಕ ಈ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ನಮಗಾಗಿ ಪ್ರಾಣ ಅರ್ಪಿಸಿದ ಮಹಾನ್ ವೀರರನ್ನು ನೆನೆಯುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು .

ಬ್ರಿಟಿಷರು ನಮ್ಮ ದೇಶಕ್ಕೆ ಮಸಾಲೆ ಪದಾರ್ಥಗಳನ್ನು ವ್ಯಾಪಾರ ಮಾಡಲು ಬಂದವರು ಆದರೆ ನಮ್ಮ ಜಾಗದಲ್ಲಿ ಇದ್ದು ನಮ್ಮನ್ನೇ ಕೀಳು ಮನೋಭಾವನೆಯಿಂದ ನೋಡಿ ಹಲವು ವರ್ಷಗಳ ಕಾಲ ನಮ್ಮನ್ನು ಅವರ ಅದೀನದಲ್ಲಿ ಇಟ್ಟುಕೊಂಡಿದ್ದರು. ಸ್ವಾತಂತ್ರ್ಯಕ್ಕೋಸ್ಕರ ಹಲವಾರು ನಾಯಕರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು, ಬಲಿದಾನಗೈದು, ನಮ್ಮ ದೇಶಕ್ಕೆ ಸ್ವತಂತ್ರ್ಯವನ್ನು ದೊರಕಿಸಿ ಕೊಟ್ಟರು ಅಂತಹ ಮಹನೀಯರಿಗೆ ನಾವೆಲ್ಲ ಇಂದು ಗೌರವವನ್ನು ಸೂಚಿಸುತ್ತಿದ್ದೇವೆ. ಎಂದು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೇಶಕ್ಕೆ ಹಾಗೂ ಸಮಾಜಕ್ಕೆ ಕೀರ್ತಿ ತರುವ ಕಾರ್ಯಮಾಡಬೇಕು ಎಂದು ಹೇಳಿದರು.

ಪ್ರತಿವರ್ಷದಂತೆ ಈ ವರ್ಷವು ನೂರಾರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನ ವಿತರಣೆ ಮಾಡಲಾಯಿತು.. ಹಾಗೂ ಶಾಲೆಯಲ್ಲಿ ನಡೆದ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.   

ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK