ಶಾಸಕ ಬೈರತಿ ಬಸವರಾಜ್ಗೆ ಮಧ್ಯಂತರ ಜಾಮೀನು: ದೇವಾಲಯದಲ್ಲಿ ವಿಷೇಶ ಪೂಜೆ ಸಲ್ಲಿಸಿ 101 ಈಡುಗಾಯಿ ಒಡೆದು ಕಾರ್ಯಕರ್ತರು ಸಭ್ರಮ.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ಹಾಗೂ ಶಾಸಕ ಬೈರತಿ ಬಸವರಾಜ್ ಅವರಿಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ಕೆ.ಆರ್.ಪುರದ ಶ್ರೀ ಕಟ್ಟೆವಿನಾಯಕ ದೇವಸ್ಥಾನದಲ್ಲಿ ವಿಷೇಶ ಪೂಜೆ ಸಲ್ಲಿಸಿ ನಂತರ 101 ಈಡುಗಾಯಿ ಒಡೆಯುವ ಮೂಲಕ ಹರಕೆಯನ್ನ ತೀರಿಸಿದರು .
ಪೂಜೆ ಸಲ್ಲಿಸಿ ಮಾತನಾಡಿದ ಕ್ಷೇತ್ರದ ಮಂಡಲ ಅಧ್ಯಕ್ಷ ಮುನೇಗೌಡ ಅವರು ಕೆ.ಆರ್.ಪುರ ಶಾಸಕರು ಹಾಗೂ ಜನಸೇವಕರಾದ ಬೈರತಿ ಬಸವರಾಜ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರವನ್ನು ಮಾಡಿದ್ದು,
ಹೈಕೋರ್ಟ್ ಜಾಮೀನು ನೀಡುವ ಮೂಲಕ ನ್ಯಾಯ ದೇವತೆ ನಮ್ಮ ಶಾಸಕರ ಪರವಾಗಿ ನಿಂತಿದೆ ಎಂದು ಹೇಳಿದರು.
ಜನವರಿ 6ವರೆಗೆ ನಿರಿಕ್ಷಣ ಜಾಮೀನು ದೊರೆತ್ತಿದ್ದು,ಪ್ರಕರಣದ ಮುಂದಿನ ಹಂತದಲ್ಲೂ ನಮ್ಮ ಶಾಸಕರಿಗೆ ಜಯ ದೊರೆಯಲಿದ್ದು,ಆರೋಪ ಮುಕ್ತರಾಗಿ ಬರಲಿದ್ದಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಂತರ ಮಾತನಾಡಿ ಮಾಜಿ ಪಾಲಿಕೆ ಸದಸ್ಯ ಅಂತೋಣಿಸ್ವಾಮಿ ಮಾತನಾಡಿ ಅನ್ಯ ಪಕ್ಷದವರು ನಮ್ಮ ಶಾಸಕರ ಅಭಿವೃದ್ದಿ ಕೆಲಸಗಳನ್ನ ನೋಡಿ ಸಹಿಸಲಾರದೆ ಅವರ ವಿರುದ್ದ ಎಷ್ಟೇ ಕುತಂತ್ರ ಮಾಡಿದರು ನ್ಯಾಯಲಯದಲ್ಲಿ ನಮ್ಮ ಕ್ಷೇತ್ರದ ಶಾಸಕರು ಆರೋಪ ಮುಕ್ತರಾಗಿ ಹೊರಗೆ ಬರುತ್ತಾರೆ ಎಂಬ ನಂಬಿಕೆ ನಮ್ಮ ಕಾರ್ಯಕರ್ತರಲ್ಲಿ ಇದೆ ಎಂದರು.
ಈ ಸಂದರ್ಭದಲ್ಲಿ ಭಟ್ಟರಹಳ್ಳಿ ಬಿ.ವಿ.ಮಂಜುನಾಥ, ಶಿವಪ್ಪ,ಡಿಸೇಲ್ ಮಂಜುನಾಥ, ರವಿ, ಎಲ್.ಐ.ಸಿ.ವೆಂಕಟೇಶ್, ಗಜೇಂದ್ರ,ಕೆ.ಪಿ.ಕೃಷ್ಣ,ರಮೇಶ್,ಗಿರೀಶ್ ನಂಜಪ್ಪ, ದೇವರಾಜ,ಕಲಾವತಿ,ಮುರಳಿ ಇದ್ದರು.