Internal Reservation: ನಮಗೆ ನ್ಯಾಯ ಸಿಗುವವರೆಗೂ ಪಕ್ಷಾತೀತವಾಗಿ ಎಲ್ಲಾ ನಾಯಕರೂ ಒಟ್ಟಾಗಿರಬೇಕು: ಆಹಾರ ಸಚಿವ ಕೆಹೆಚ್. ಮುನಿಯಪ್ಪ .

ರಾಜಕೀಯರಾಜ್ಯ

ರಾಘವೇಂದ್ರ ಹೆಚ್​​.ಎ

4/6/20251 min read

ವಿಜಯನಗರ.: ಎಲ್ಲಿಯವರೆಗೂ ನಮ್ಮ ಸಮುದಾಯದ ಯಾವುದೇ ಪಕ್ಷದ ನಾಯಕರಿರಲಿ ಒಗ್ಗಟ್ಟಾಗಿರುವುದಿಲ್ಲವೋ ಅಲ್ಲಿಯವರೆಗೂ ನಮಗೆ ನ್ಯಾಯ ಸಿಗುವುದಿಲ್ಲಾಎಂದು ಆಹಾರ ಇಲಾಖೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್​.ಮುನಿಯಪ್ಪ ಅಭಿಪ್ರಾಯ ಪಟ್ಟರು.

ಹೊಸಪೇಟೆಯ ARS ಹೋಮ್ ಸ್ಟೇ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಮಾದಾರಚನ್ನಯ್ಯ ಸೇವಾ ಸಮಿತಿಯ ದ್ವಿತೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು,

ಪರಿಶಿಷ್ಟ ಜಾತಿಯ ಎಡ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುಲು ನಾವು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತಿದ್ದೇವೆ. ಎಲ್ಲಿಯವರೆಗೂ ನಮ್ಮ ಸಮುದಾಯದ ಯಾವುದೇ ಪಕ್ಷದ ನಾಯಕರಿರಲಿ ಒಗ್ಗಟ್ಟಾಗಿರುವುದಿಲ್ಲವೋ ಅಲ್ಲಿಯವರೆಗೂ ನಮಗೆ ನ್ಯಾಯ ಸಿಗುವುದಿಲ್ಲ,

ಸಮುದಾಯದ ಪರವಾಗಿ ನಾನು 1991 ರಿಂದ 7 ಬಾರಿ ಸಂಸದನಾಗಿ ನಾನು ಪ್ರಯತ್ನವನ್ನು ಪಡುತ್ತಿದ್ದು ಅಂದಿನ ಪ್ರಧಾನ ಮಂತ್ರಿಗಳಾದ ಪಿವಿ.ನರಸಿಂಹರಾವ್ ,ವಾಜಿಪೇಯಿ,ಮನಮೋಹನ್ ಸಿಂಗ್ ರವರಿಗೆ ನಮ್ಮ ಸಮುದಾಯದ ಎಲ್ಲಾ ಸಂಸದರೂ ಒಟ್ಟಾಗಿ ನಿಯೋಗವು ಹೋಗಿ ಮನವಿ ಮಾಡಿದ್ದರೂ ಇಲ್ಲಿಯವರೆಗೂ ನಮ್ಮ ಸಮುದಾಯಕ್ಕೆ ದಕ್ಕಬೇಕಾದ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಸ್ಥಾನಮಾನಗಳು ಸಿಕ್ಕಿಲ್ಲ. ಯಾವುದೇ ಪಕ್ಷವಿರಲಿ ನಾವು ಒಟ್ಟಾಗಿ ಹೋಗಬೇಕು ಎಂದು ಕರೆ ಕೊಟ್ಟರು.

ದಕ್ಷಿಣ ಭಾರತದ ಎಲ್ಲಾ ರಾಜ್ಯ ಗಳಲ್ಲಿಯೂ ಜಾರಿಗೊಳಿಸಲು ನಾವು ನಿರ್ದಾರ ಮಾಡಿದ್ದು ವರ್ಗೀಕರಣ ಮಾಡಲು ಸಾಧ್ಯವಾಗಲಿಲ್ಲ ಸಮುದಾಯಕ್ಕೆ ಸರಿಯಾದ ನ್ಯಾಯ ಸಿಗಲೇ ಬೇಕೆಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸಲು ಒಂದು ಐತಹಾಸಿಕ ಮಹತ್ವದ ತೀರ್ಪುನೀಡಿದ್ದು ಸಮುದಾಯಕ್ಕೆ ನ್ಯಾಯ ಸಿಗುವಂತಾಗಿದೆ.

ತೀರ್ಪು ಬಂದ ಕೂಡಲೇ ನಾನು ಅಬಕಾರಿ ಸಚಿವ ತಿಮ್ಮಾಪೂರ ರವರು ಮುಖ್ಯಮಂತ್ರಿ ಗಳನ್ನು ಬೇಟಿ ಮಾಡಿ ಚರ್ಚೆ ಮಾಡಿ ಅನುಷ್ಠಾನಕ್ಕೆ ಒತ್ತಾಯಿಸಿದಾಗ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅನುಷ್ಠಾನ ಮಾಡುತ್ತೇವೆ ಎಂದರು

ಕೆಪಿಸಿಸಿ.ಅದ್ಯಕ್ಷರೂ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರು ಸಹ ತೀರ್ಪುನ್ನು ಸ್ವಾಗತಿಸಿ ತಡ ಮಾಡದೆ ಅನುಷ್ಠಾನ ಮಾಡಬೇಕು ಎಂದು ವಿಶ್ವಾಸ ವ್ಯಕ್ತಿ ಪಡಿಸಿದರು.

ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಸಮುದಾಯದ ಜನಸಂಖ್ಯೆಯ ಅನುಗುಣವಾಗಿ ಮತ್ತು ಆರ್ಥಿಕ ಸ್ಥಿತಿಗಳುನ್ನು ಅವಲೋಕನ ಮಾಡಿ ನಿರ್ದಿಷ್ಟ ವಾದ ಮಾಹಿತಿಗಳೊಂದಿಗೆ ನಮಗೆ ನ್ಯಾಯ ಒದಗಿಸಲಿದ್ದಾರೆ ಎಂದರು

ಈಸಂದರ್ಭದಲ್ಲಿಶ್ರೀ ಶ್ರೀಮಾದರಚನ್ನಯ್ಯಸ್ವಾಮೀಜಿ, ಸಂಸದರಾದ ಗೋವಿಂದಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಂಸದರಾದ ಚಂದ್ರಪ್ಪ, ರಮೇಶ್​ ಜಿಗಜಿಣಿಗಿ, ಬಹುಜನ ಸಮಾಜದ ರಾಜ್ಯಾದ್ಯಕ್ಷ ಮಾರಾಸಂದ್ರ ಮುನಿಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ