ಮಹದೇವಪುರ: ಕನ್ನಮಂಗಲ ಪಂ ಗ್ರಾಮ ಸಭೆ: ಶಾಸಕರ ಎದುರೆ ಪಂಚಾಯತಿ ಅಕ್ರಮಗಳ ವಿರುದ್ದ ಧ್ವನಿ ಎತ್ತಿದ್ದ ಗ್ರಾ.ಪಂ.ಸದಸ್ಯರು.
ಸ್ಥಳೀಯ ಸುದ್ದಿ


ಮಹದೇವಪುರ: ಗ್ರಾಮ ಪಂಚಾಯತಿ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಕನ್ನಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಹಾಗೂ ಅವರ ಪತಿ ರವಿ ಸರ್ವಾಧಿಕಾರಿಯಾಗಿ ನಡೆದು ಕೊಳ್ಳುತ್ತಿದ್ದಾರೆ ಎಂದು ಗ್ರಾ.ಪ ಸದಸ್ಯರು ಗ್ರಾಮಸಭೆ ವೇದಿಕೆ ಮೇಲೆ ಬರದೇ ಬಹಿಸ್ಕಾರ ಮಾಡಿದರು.
ಕನ್ನಮಂಗಲ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ ಗ್ರಾಮ ಸಭೆಯಲ್ಲಿ ಶಾಸಕರ ಎದುರೇ ಪಂ. ಅಧ್ಯಕ್ಷರ ಸರ್ವಾಧಿಕಾರದ ವಿರುದ್ದ ದೂರಿದರು.
ಅಧಿಕಾರಿಗಳನ್ನು ಕೈ ಗೊಂಬೆ ಮಾಡಿಕೊಂಡು ಗ್ರಾಮ ಪಂಚಾಯಿತಿಯ ಕೋಟ್ಯಾಂತರ ರೂಪಾಯಿಯನ್ನು ದುರುಪಯೋಗ ಮಾಡಿದ್ದಾರೆ ಎಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಏಳು ತಿಂಗಳಿನಿಂದಲ್ಲೂ ಯಾವುದೇ ಸಾಮಾನ್ಯ ಸಭೆ ನಡೆಸಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕವಾದ ರಸ್ತೆ, ಡಾಂಬರೀಕರಣವಾಗಿಲ್ಲ ಅಪಾರ್ಟ್ಮೆಂಟ್ ಕೊಳಚೆನೀರು ಕೆರೆಗಳಿಗೆ ಬಿಡುತ್ತಿರುವುದು, ಪ್ರಮುಖವಾಗಿ ಕಸ ಸಮಸ್ಯೆಗಳ ಬಗ್ಗೆ
ಸಭೆಯಲ್ಲಿ ನೇರವಾಗಿ ಪಂಚಾಯತಿ ಸದಸ್ಯರೇ ಆರೋಪಿಸಿದರು.ಅಧ್ಯಕ್ಷರು ಮಾಡಿರುವ ಹಗರಣಗಳ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಶಾಕರನ್ನು ಒತ್ತಾಯಿಸಿದರು.
ಗ್ರಾಮಸಭೆ ಕಾರ್ಯಕ್ರಮ ಮಾಡುವುದರ ಬಗ್ಗೆ ಚರ್ಚೆ ಮಾಡದೇ ಏಕಾಏಕಿ ದಿನಾಂಕವನ್ನ ನಿಗದಿ ಮಾಡಿ ಸದಸ್ಯರಿಗೆ ಒಂದು ದಿನದ ಮುಂಚೆ ಆಹ್ವಾನವನ್ನು ನೀಡಿದ್ದಾರೆ . ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ನಮ್ಮ ಅನುಮತಿ ಪಡೆಯದೇ ಎಲ್ಲಾವನ್ನು ಅಧ್ಯಕ್ಷರು ಮತ್ತು ಪಿಡಿಒ ಇಬ್ಬರೇ ನಿರ್ಣಾಯಗಳನ್ನು ತೆಗೆದುಕೊಂಡಿದ್ದಾರೆ ಎಂದು ದೂರಿದರು .ಪಂಚಾಯತಿಯಲ್ಲಿ ಓಟು 16 ಮಂದಿ ಸದಸ್ಯರಿದ್ದು 12 ಮಂದಿ ಸದಸ್ಯರ ವಿಶ್ವಾಸವನ್ನ ತೆಗೆದುಕೊಳ್ಳದೇ ಇರುವುದನ್ನ ಅಧ್ಯಕ್ಷೆ ಮತ್ತು ಅವರ ಪತಿ ರವಿ ವಿರುದ್ಧ ಸಿಡಿದೆದ್ದಿದರು.
ಶಾಸಕರ ಮುಂದೆ ಪಂಚಾಯತಿ ಅಕ್ರಮಗಳ ಬಗ್ಗೆ ಆಕ್ರೋಶ:
ಮಹಿಳಾ ಸ್ವ ಸಹಾಯ ಸಂಘಟನೆ ಸಬಲಿಕರಣ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು ಒಂದುವರೆ ಲಕ್ಷ ರೂಗಳನ್ನ ಪ್ರೋತ್ಸಾಹ ಧನ ನೀಡಲು ಗ್ರ.ಪಂ ಸಭೆಯಲ್ಲಿ ನಿರ್ಮಾನಿಸಲಾಗಿತ್ತು. ಪ್ರತಿ ತಿಂಗಳು ಆ ಹಣ ಕೊಡುತ್ತಿದ್ದಾರೆ ಆದರೆ ಹಣ ಯಾರಿಗೆ ತಲುಪುತ್ತಿದೆ ಎಂದು ಗೊತ್ತಿಲ್ಲ ಎಂದು ಆರೋಪಿಸಿದರು.
ಕನ್ನ ಮಂಗಲ ಕೆರೆ ಅಭಿವೃದ್ಧಿಗೆ ಎರಡು ಕಂಪನಿಗಳಿಗೆ ಗುತ್ತಿಗೆ (ಎಂಒಇ) ನೀಡಿದ ಮೇಲೂ ಸೂಮಾರು 40 ಲಕ್ಷ ರೂಪಾಯಿ ಹಣವನ್ನು ಹರ್ಷ ಎಂಬುವರ ಹೆಸರಿಗೆ ಸಂದಾಯ ಆಗಿದೆ ಎಂದು ಆರೋಪಿಸಿದರು.
2023-24 ರ ಕ್ರಿಯಾ ಯೋಜನೆ ಮುಗಿದ ಮೇಲೂ ಪಂಚಾಯತಿ ನಡವಳಿಕೆ ಪುಸ್ತಕದಲ್ಲಿ 2 ಕೋಟಿ 12 ಲಕ್ಷ ಕಾಮಗಾರಿ ಬಿಲ್ ಅನ್ನು ಬರೆದಿದ್ದಾರೆ ಇದನ್ನ ಯಾರು ಬರೆದರು ಎಂದು ಗೊತ್ತಿಲ್ಲ.ಸಾಮಾನ್ಯ ಸಭೆ ಕರೆಯಲ್ಲ,ಕೇವಲ ಎಂಟು ಜನ ಇದ್ದರೆ ಸಾಕು ಬಿಲ್ ಗಳಿಗೆ ಅನುಮೊದನೆ ನೀಡಲಾಗುತ್ತದೆ ಎಂದು ಶಾಸಕ ಮುಂದೆಯೇ ಆರೋಪ ಮಾಡಿದರು.
ಅನಧಿಕೃತ ಶಾಲೆ ಒಂದು ಆರಂಭವಾಗಿ ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟದೆ ರಾಜಾರೋಷವಾಗಿ ಶಾಲೆ ನಡೆಸುತ್ತಿದೆ ಇದರ ವಿರುದ್ದ ಪಂಚಾಯತಿ ಧ್ವನಿ ಎತ್ತುತಿಲ್ಲ ಎಂದರು.
ರಸ್ತೆ ಬದಿಯಲ್ಲಿ ರೈತರು ತಾವೇ ಬೆಳೆದ ತರಕಾರಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.ಆದರೆ ಪಂಚಾಯತಿ ಅಧಿಕಾರಿಗಳು ರಸ್ಗೆ ಬದಿ ವ್ಯಾಪಾರ ಮಾಡಬಾರದು ಎಂದು ತೆರೆವು ಕಾರ್ಯ ಮಾಡುತ್ತಿದ್ದಾರೆ.ರೈತರಿಗೆ ಬೆಳೆಗಳನ್ನ ಮಾರಾಟ ಮಾಡಲು ಒಂದು ವ್ಯವಸ್ಥಿತ ಜಾಗವನ್ನ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಂಚಾಯತಿ ಸದಸ್ಯರಾದ ಯಲ್ಲಪ್ಪ,ಚೈತ್ರಾಯೋಗನಂದ್,ಸೋಮಶೇಖರ್ ಮತ್ತಿತರ ಸದಸ್ಯರು ಸಿಓ ಹಾಗೂ ಶಾಸಕರಿಗೆ ದೂರಿನ ಪ್ರತಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.