ಕರ್ನಾಟಕ ನವಶಕ್ತಿ ತೋಟಗರರ ಸಹಕಾರ ಸಂಘಕ್ಕೆ ₹ 26 ಲಕ್ಷ ನಿವ್ವಳ ಲಾಭ.
ಸ್ಥಳೀಯ ಸುದ್ದಿ


ಮಹದೇವಪುರ: ಸದಸ್ಯರ ಸಹಕಾರ ಹಾಗೂ ನಿರ್ದೇಶಕರ ಸಹಭಾಗಿತ್ವದೊಂದಿಗೆ ನಮ್ಮ ಕರ್ನಾಟಕ ನವಶಕ್ತಿ ತೋಟಗರರ ಸಹಕಾರ ಸಂಘ ತನ್ನ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದ್ದು ಕಳೆದ ಆರ್ಥಿಕ ವರ್ಷದಲ್ಲಿ ₹ 26 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಬಾಬು ತಿಳಿಸಿದರು.
ಮಹದೇವಪುರ ಕ್ಷೇತ್ರದ ಬೆಳ್ಳಂದೂರಿನ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ತಿಗಳ ಸಮಾಜದ ಕೆ. ಎನ್. ಟಿ.ಎಸ್.ಎಸ್.ಎನ್ ಕೋ ಆಪರೇಟಿವ್ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಖಾಸಗಿ ಬ್ಯಾಂಕುಗಳು ಮತ್ತು ಬೇರೆ ಕೋ ಆಪರೇಟಿವ್ ಸೊಸೈಟಿ ಸಂಘಗಳಿಗಿಂತ ತೋಟಗಾರರ ಸಹಕಾರ ಸಂಘ ಹೆಚ್ಚು ಲಾಭದಾಯಕವಾಗಿದೆ. ಇತರೆ ಸೊಸೈಟಿ ಮತ್ತು ಬ್ಯಾಂಕ್ ಗಳಲ್ಲಿ ವಾರ್ಷಿಕ ಶೇಕಡಾ 6-7 % ರಷ್ಟು ಲಾಭಾಂಶ ನೀಡಿದರೆ ಕೆ.ಎನ್.ಟಿ.ಎಸ್.ಎಸ್. ಅಧಿಕ ಶೇಕಡಾ 15 ಡಿವಿಡೆಂಡ್ ನೀಡುತ್ತಿದೆ. ಕಳೆದ ಆರು ವರ್ಷಗಳಿಂದ ಸತತವಾಗಿ 15% ಡಿವಿಡೆಂಡ್ ನೀಡುತ್ತಾ ಬರುತ್ತಿದೆ ಎಂದು ತಿಳಿಸಿದರು.
ಮುಂದಿನ ವರ್ಷಗಳಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪುರಸ್ಕಾರ ಗಳನ್ನು ನೀಡಲಾಗುವುದು ಎಂದರು.ಸಂಘ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಇದಕ್ಕೆಲ್ಲಾ ದುಡಿದ ಎಲ್ಲಾ ನಿರ್ದೇಶಕರಿಗೆ ಮತ್ತು ಠೇವಣಿದಾರರಿಗೆ ಕೃತಜ್ಞತೆ ಸಲ್ಲಿಸಿದರು.
ನಂತರ ಬೆಂಗಳೂರು ಪೂರ್ವ ತಾಲ್ಲೂಕು ವಹ್ನಿಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ ಕೆ.ಎನ್.ಟಿ.ಎಸ್.ಎಸ್.ಎನ್. ಸೊಸೈಟಿ , ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಡಿವಿಡೆಂಡ್ ಮೊತ್ತವನ್ನು ಹೆಚ್ಚಾಗಿ ಕೊಡಬೇಕು ಎಂದು ಮನವಿ ಮಾಡಿದರು. ಕರೋನ ಸಮಯದಲ್ಲೂ ಒಳ್ಳೆಯ ಲಾಭಾಂಶ ಗಳಿಸಿದೆ.ಇದಕ್ಕೆ ಜನರು ಸಹ ಸಹಕರಿಸಿದ್ದು ಮುಂದಿನ ವರ್ಷ ಇನ್ನೂ ಹೆಚ್ಚು ಹೆಚ್ಚು ಠೇವಣಿದಾರರನ್ನು ಹಣವನ್ನು ಹೂಡಿಕೆ
ಮಾಡಬೇಕು ಅದೇ ರೀತಿ ಸಾಲವನ್ನು ಪಡೆಯುವವರು ಸರಿಯಾಗಿ ಪಾವತಿ ಮಾಡಬೇಕು ಎಂದರು.ವಹ್ನಿಕುಲ ಕ್ಷತ್ರಿಯ ಸಮಾಜದ ಉತ್ತಮ ಸಹಕಾರದಿಂದ ಬ್ಯಾಂಕ್ ಒಳ್ಳೆಯ ಲಾಭ ಪಡೆಯುತ್ತಿದೆ ಇದುವರೆಗೂ ಯಾವುದೇ ಸಹಕಾರ ಬ್ಯಾಂಕುಗಳು ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸಭೆ ಮಾಡಿಲ್ಲ ಮೊದಲ ಬಾರಿಗೆ ಕೆ.ಎನ್.ಟಿ.ಎಸ್. ಎಸ್.ಎನ್ ಸೊಸೈಟಿ ಕಾರ್ಯಕ್ರಮ ಮಾಡುತ್ತಿದೆ ಎಂದರು.ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸದಸ್ಯತ್ವವನ್ನು ಪಡೆಯಬೇಕು ಯಾವ ಸಮುದಾಯದವರೂ ಬೇಕಾದರೂ ಠೇವಣಿ ಆರಂಭಿಸಬಹುದು ಆದರಿಂದ ಪೂರ್ವ ತಾಲ್ಲೂಕಿನಲ್ಲಿ ಈ ಸಂಘ ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.
ಮೊಬೈಲ್ ಮೂಲಕವೇ ಗ್ರಾಹಕರು ಬ್ಯಾಂಕಿಂಗ್ ಸೇವೆ ಪಡೆದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಮೊಬೈಲ್ ತಂತ್ರಾಂಶವನ್ನು ಸಿದ್ಧಪಡಿಸಿದ್ದು,ನಮ್ಮ ಗ್ರಾಹಕರು ಮನೆಯಿಂದಲೇ ಸಹಕಾರ ಬ್ಯಾಂಕ್ ನ ಎಲ್ಲಾ ವ್ಯವಹಾರಗಳನ್ನ ತಿಳಿದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವೈ.ಜಗನ್ನಾಥ, ನಿರ್ದೇಶಕರಾದ ಜಿಎಸ್ ಗೋಪಾಲಯ್ಯ,ಕೃಷ್ಣಮೂರ್ತಿ, ಕುಪ್ಪಿಮಂಜುನಾಥ,ಪಿ.ಎಂ.ಸೋಮಶೇಖರ್,ಮುಖಂಡರಾದ ಹೊರಮಾವು ರಾಮಚಂದ್ರಪ್ಪ, ಇದ್ದರು