ಮಹದೇವಪುರ ಕ್ಷೇತ್ರಕ್ಕೆ ಕೇರಳ ಸಮಾಜದ ಕೊಡುಗೆ ಅಪಾರ ಅಂಬಾವಳಿ ಅಭಿಮತ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/25/20251 min read

ಮಹದೇವಪುರ: ಕ್ಷೇತ್ರದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಗೆ ಕೇರಳ ಸಮುದಾಯದ ಕೊಡುಗೆ ಅಪಾರವಾದದ್ದು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಜೈನ್ ಹೆರಿಟೇಜ್ ಶಾಲೆಯಲ್ಲಿ ಪ್ರವಾಸಿ ಮಲೆಯಾಳಿ ಅಸೋಸಿ ಯೇಷನ್ ವತಿಯಿಂದ ಆಯೋಜಿಸಿದ್ದ ಚಿಂಗನಿಲಾವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಓಣಂ ಅಪಾರ ಹಬ್ಬಕ್ಕೆ ಸಾಂಸ್ಕೃತಿಕ ಹಿನ್ನೆಲೆ ಇದ್ದು ಕೇರಳ ಸಮಾಜದ ವತಿಯಿಂದ ನಮ್ಮ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಓಣಂ ಆಚರಣೆ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದರು.

ಮಹದೇವಪುರದ ಸಾಂಸ್ಕೃತಿಕ ಶ್ರೀಮಂತಿಕೆಗೆ ಕೇರಳ ಸಮಾಜದ ಕೊಡುಗೆ ಅಪಾರ. ನಮ್ಮ ಮಹದೇವ ಪುರದಲ್ಲಿ ವಿವಿಧ ರಾಜ್ಯಗಳ ಜನರು ವಾಸವಾಗಿದ್ದು, ವಿವಿಧತೆಯಲ್ಲಿ ಏಕತೆ ಎಂಬ ಕಲ್ಪನಿಗೆ ನಮ್ಮ ಕ್ಷೇತ್ರ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಹಲವು ಕೇರಳ ಮೂಲದವರು ಕನ್ನಡವನ್ನು ಉತ್ತಮವಾಗಿ ಮಾತನಾಡುತ್ತಿದ್ದದ್ದನ್ನು ಕಂಡು ಸಂತಸವಾಯಿತು. ಇದೆ ರೀತಿ ಕನ್ನಡಬಾರದವರು ಕನ್ನಡ ಕಲಿಯಿರಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೇರಳ ಸಂಸ್ಕ್ರತಿಯ ಹೂವಿನ ರಂಗೋಲಿ, ವಿವಿಧ ಸಂಪ್ರದಾಯ ನೃತ್ಯ, ಓಣಂ ಹಾಡುಗಳು, ಓಣಂ ಗಾದೆಗಳು, ಹುಲಿವೇಷ ಮುಂತಾದ ಬಗೆಬಗೆಯ ಸಂಭ್ರಮದ ಕಾರ್ಯಕ್ರಮಗಳನ್ನ ಏರ್ಪಡಿದಲಾಗಿತ್ತು.

ಪ್ರವಾಸಿ ಕಾರ್ಯಕ್ರಮದಲ್ಲಿ ಮಲಯಾಳಿ ಅಸೋಸಿಯೇಷನ್ ಚೇರ್‌ಮನ್ ಡಿ.ಆ‌ರ್.ಕೆ.ಪಿಳ್ಳೆ, ಅಧ್ಯಕ್ಷ ರಮೇಶ್, ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ಅರುಣ್ ಕುಮಾರ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಎಚ್‌. ಎಸ್.ಪಿಳ್ಳಪ್ಪ, ಹಿರಿಯ ಮುಖಂಡ ಪಾಪಣ್ಣ ಸೇರಿದಂತೆ ಪ್ರವಾಸಿ ಮಲಯಾಳಿ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ಇದ್ದರು.