ಕೊಟಾಕ್ ಇನ್ಸೂರೆನ್ಸ್ ಶಾಖೆ ಉದ್ಘಾಟನೆ
ಸ್ಥಳೀಯ ಸುದ್ದಿ


ಕೆಆರ್ ಪುರ: ಇನ್ಸೂರೆನ್ಸ್ ಗಳಲ್ಲಿ ಎಚ್ಚರದಿಂದ ಹೂಡಿಕೆ ಮಾಡಿ ಎಂದು ಎಸ್ ಕೆಎಫ್ ಮುಖ್ಯಸ್ಥ ಕಲ್ಕೆರೆ ಕೃಷ್ಣಮೂರ್ತಿ ತಿಳಿಸಿದರು.
ರಾಮಮೂರ್ತಿನಗರದ ಎನ್ ಆರ್ ಐ ಬಡಾವಣೆಯಲ್ಲಿ ಕೊಟಾಕ್ ಲೈಫ್ ಇನ್ಸೂರೆನ್ಸ್ ನ ಶಾಖೆ ಯನ್ನು ಸಚಿವ ಸಂತೋಷ್ ಲಾಡ್ ಅವರ ಸಹೋದರ್ ವಿಶ್ವಾಸ್ ಲಾಡ್ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ದಿನನಿತ್ಯದ ಜೀವನದ ಜಂಜಾಟದಲ್ಲಿ ಜನರು ಸುರಕ್ಷತೆ ಹಾಗೂ ದೂರದೃಷ್ಟಿ ಯನ್ನೇ ಮರೆತಿರುತ್ತಾರೆ ಇದರಿಂದ ಸಾಕಷ್ಟು ನೋವುಗಳು ಉಂಟಾಗುತ್ತದೆ ಎಂದು ಹೇಳಿದರು.
ಮನುಷ್ಯನಿಗೆ ಇನ್ಸೂರೆನ್ಸ್ ಬಹಳ ಮುಖ್ಯ, ಕುಟುಂಬದ ಸುರಕ್ಷತೆಗಾಗಿ ಇನ್ಸೂರೆನ್ಸ್ ಅನ್ನು ಸದುಪಯೋಗಪಡೆಸಿಕೊಳ್ಳಿ ಎಂದು ಹೇಳಿದರು.
ಪ್ರೀಮಿಯಂ ಹೆಚ್ಚಾಗಿದೆ ಹಣ ಉಳಿಸೋಣ ಅಂತ ಅಂದುಕೊಂಡರೆ ಅಲ್ಲಿ ಜೀವನವನ್ನೇ ರಿಸ್ಕ್ ನಲ್ಲಿ ಇಟ್ಟಂತೆ ಆಗುತ್ತದೆ ಆದ್ದರಿಂದ ಜೀವನಕ್ಕೆ ಹೆಚ್ಚು ಸುರಕ್ಷತೆ ಅತ್ಯವಶ್ಯಕ ಎಂದು ಹೇಳಿದರು.
ಇತ್ತೀಚೆಗೆ ಖಾಸಗಿ ಇನ್ಸೂರೆನ್ಸ್ ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ ಜನರನ್ನು ಮರಳು ಮಾಡಿ ಹೂಡಿಕೆ ಮಾಡಿಸಿ ಬಳಿಕ ಹಲವು ಕಾರಣಗಳನ್ನು ನೀಡಿ ಇನ್ಸೂರೆನ್ಸ್ ಉಪಯೋಗಕ್ಕೆ ಬಾರದಂತೆ ಆಗುತ್ತದೆ ಆದ್ದರಿಂದ ಹೂಡಿಕೆ ಮಾಡುವ ಮುನ್ನ ಎಚ್ಚರ ಇರಲಿ ಎಂದರು.
ವಿಶ್ವಾಸ್ ಲಾಡ್ ಅವರು ಮಾತನಾಡಿ, ಮನುಷ್ಯನಿಗೆ ಇನ್ಸೂರೆನ್ಸ್ ಅತ್ಯವಶ್ಯಕ, ನಮ್ಮ ಎಲ್ಲಾ ವ್ಯವಹಾರಗಳಿಗೂ ಸಹ ಇನ್ಸೂರೆನ್ಸ್ ಮಾಡಿಸಿದ್ದೇವೆ ಎಂದು ಹೇಳಿದರು.
ಸ್ಥಳೀಯ ಶಾಸಕ ಬೈರತಿ ಬಸವರಾಜ ಹಾಗೂ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ಅವರು ಶಾಖೆ ಉದ್ಘಾಟನೆಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಎನ್ ಆರ್ ಐ ಶಾಖೆ ಪಾಲುದಾರ ಆನಂದ್, ಶಾಖಾ ಮುಖ್ಯಸ್ಥ ಶ್ರೀನಿವಾಸ್, ರೀಜನಲ್ ಹೆಡ್ ಸುನೀಲ್ ಕುಮಾರ್, ಡಿಸ್ಟಿಕ್ ಹೆಡ್ ಕಾನ್ ಬಹುದ್ದುರ್, ಸ್ಟೇಟ್ ಹೆಡ್ ಶಿವರಾಮ್ ಕೃಷ್ಣನ್ , ಬ್ರಾಂಚ್ ಮ್ಯಾನೆಜರ್ ಸಂತೋಷ್ ಮತ್ತಿತರರಿದ್ದರು.