ಕೆ ಆರ್ ಪುರ: ಸುಗ್ಗಿ ಹಬ್ಬದ ಸಂಭ್ರಮ, ಸಿಂಗಾರಗೊಂಡ ರಾಸುಗಳ ಮೆರವಣಿಗೆ
ಸ್ಥಳೀಯ ಸುದ್ದಿ


ಕೆ.ಆರ್.ಪುರ: ರಾಸುಗಳಿಗೆ ಪ್ರಥಮ ಪೂಜೆ ಸಲ್ಲಿಸುವುದು ಧಾರ್ಮಿಕ ಆಚರಣೆ, ಸಂಕ್ರಾಂತಿ ಕೇವಲ ಹಬ್ಬವಲ್ಲ. ಅದೊಂದು ಸಮೃದ್ಧಿ ಸಂಕೇತ ಎಂದು ಸಮಾಜ ಸೇವಕ ಹೇಮಂತ್ ಚಿನ್ನಿ ತಿಳಿಸಿದರು.
ಕೆ.ಆರ್.ಪುರದ ಕೋಟೆ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಬಳಿ ಸಂಕ್ರಾಂತಿ ಪ್ರಯುಕ್ತ ರಾಸುಗಳ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಕೃತಿಯನ್ನು ಪೂಜಿಸುವ ಪದ್ಧತಿ ರೈತಾಪಿ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ರೈತ ತಾನು ಬೆಳೆದ ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡಿ ಸಮೃದ್ಧಿಗೊಳಿಸುವ ಸಲುವಾಗಿ ಅನ್ನ ಕೊಟ್ಟ ಭೂಮಿ ತಾಯಿ, ರಾಸು ಮತ್ತು ಫಸಲಿಗೆ ವಿಶೇಷ ಪೂಜೆ ಸಲ್ಲಿಸುತ್ತಾನೆ ಎಂದು ಅಭಿಪ್ರಾಯಪಟ್ಟರು.
ಕೋಟೆ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಿಂದ ಶ್ರೀ ಮಹಾಬಲೇಶ್ವರ ದೇವಾಲಯ ವರೆಗೂ ಹಸುಕರು ಮತ್ತು ಎಮ್ಮೆ ಮುಂತಾದ ಜಾನುವಾರಗಳ ಮೆರವಣಿಗೆ ಕಿಲು ಕುದುರೆ.ಗಾರುಡಿ ಬೊಂಬೆ,ಬ್ಯಾಂಡ್ ಸೆಟ್ ಮತ್ತು ತಮಟೆ ವಾದ್ಯದೊಂದಿಗೆ ಅದ್ದೂರಿಯಾಗಿ ನಡೆಯಿತು ಎಂದರು.
ದನಕರುಗಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ದನಕರುಗಳ ಮಾಲೀಕರಿಗೆ ಮೊದಲ ಬಹುಮಾನ ಹತ್ತು ಸಾವಿರ. ಎರಡನೇ ಬಹುಮಾನ ಐದು ಸಾವಿರ ಮೂರನೇ ಬಹುಮಾನ ಮೂರು ಸಾವಿರ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ದನಕರುಗಳಿಗೆ ಸಮಾಧಾನಕರ ನಗದು ಬಹುಮಾನ ವಿತರಿಸಲಾಯಿತು.ಹಾಗೂ ರಾಸುಗಳಿಗೆ ಉಚಿತವಾಗಿ ಮೇವು ನೀಡಲಾಯಿತು ಎಂದರು.
ವಿನಾಯಕ ಜೆವೆಲ್ಲೆರಿ ಮಾಲೀಕರು ಹಾಗೂ ಸಮಾಜ ಸೇವಕರಾದ ಚಿದಂಬರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹಳ್ಳಿಗಾಡಿನಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು ಪೂರ್ವಿಕರು ನಡೆಸಿಕೊಂಡು ಬಂದ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಹೇಳಿದರು.
ಸಂಕ್ರಾಂತಿ ಸಂಭ್ರಮದಲ್ಲಿ ಪ್ರಸಾದ್ ವಿನಿಯೋಗ ಹಾಗೂ ಸ್ನೇಹ ಮತ್ತು ಪ್ರೀತಿಯ ಸಂಕೇತಾವಾಗಿ ಐದು ಸಾವಿರ ಜನರಿಗೆ ಎಳ್ಳು ಬೆಲ್ಲ ನೀಡಿ ಪ್ರೀತಿಯಿಂದ ಸ್ವಾಗತಿಸಲಾಯಿತು ಎಂದರು.
ನಮ್ಮ ಪೂರ್ವಿಕರು ಹಬ್ಬ ಹರಿದಿನಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ರೂಢಿ ಮಾಡಿದ್ದಾರೆ. ಅವುಗಳನ್ನು ಮುಂದಿನಪೀಳಿಗೆಯೂ ಆಚರಿಸುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಪ್ರಮುಖವಾಗಿ ಸಂಕ್ರಾತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪಾರ್ದಾಪಣೆ ಮಾಡುವ ಕಾಲ. ಈ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವವಿದೆ. ಹಿರಿಯ ಸಂಪ್ರದಾಯಗಳನ್ನು ಉಳಿಸಿ ಬೆಳಸಲು ಇಂತಹ ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಣೆ ಮಾಡೋಣ ಎಂದರು.
ಸಂಕ್ರಾಂತಿ ಹಬ್ಬ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬವಾಗಿದೆ. ಕೃಷ್ಣರಾಜಪುರ ಗ್ರಾಮದಲ್ಲಿ ಅನಾದಿಕಾಲದಿಂದಲೂ ಪ್ರತಿ ವರ್ಷದಂತೆ ಸಾಂಪ್ರದಾಯಿಕ ರಾಸುಗಳನ್ನು ಸಿಂಗರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಆಂತೋಣಿಸ್ವಾಮಿ. ಕೆ.ಎನ್. ಸರಸ್ವತಮ್ಮ. ಆಮರ್ ಜ್ಯೋತಿ ಮೋಹನ್, ಶಿವಪ್ಪ
ಚಿದಂಬರ್, ಕೆ.ವೈ.ರಾಕೇಶ್.ಗಿರೀಶ್.ಮಂಜುಳಾ ದೇವಿ,ಮುರಳಿಸ್ವಾಮಿ.ಕೆ.ಪಿ.ಕೃಷ್ಣ,ನಿಖಿಲ್ ಮಂಜುನಾಥ್,ತೇಜಸ್ ಬುಜ್ಜ .ರವಿ. ನಾಗಭೂಷಣ, ಮತ್ತಿತರರು ಇದ್ದರು