KR Puram: ಕ್ಷೇತ್ರದ ಗುತ್ತಿಗೆದಾರರ ಸಂಘದಿಂದ ವಿಜೃಂಭಣೆ ಶ್ರೀ ರಾಮ ನವಮಿ ಹಬ್ಬ.ನೂರಾರು ಜನರಿಗೆ ಅನ್ನ ಸಂತರ್ಪಣೆ.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಕೆ.ಆರ್.ಪುರ ಕ್ಷೇತ್ರದ ಗುತ್ತಿದಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರೀರಾಮನವಮಿ ಹಬ್ಬದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಮಹದೇವಪುರ ವಲಯ ಆಯುಕ್ತ ರಮೇಶ್ ಅವರು ಪೂಜೆ ಸಲ್ಲಿಸಿ ಪುಷ್ಪನಮನ ಮಾಡುವ ಮೂಲಕ ಶ್ರದ್ಧಾ-ಭಕ್ತಿಯಿಂದ ರಾಮನವಮಿ ಆಚರಿಸಲಾಯಿತು.
ಮೊದಲಿಗೆ ಗುತ್ತಿಗೆದಾರರ ಕಚೇರಿಯಲ್ಲಿ ಪೂಜೆ ಮಾಡಿ ನಂತರ ವಿವಿಧ ಹೂವಿನ ಅಲಂಕಾರ ಮಾಡಿದ್ದ ಮಂಗನ ಗೋರಿಗೆ ಪೂಜೆ ಸಲ್ಲಿಸುವ ಮೂಲಕ ಮುಂದಿನ ವರ್ಷ ಗೋರಿಗೆ ದೇವಸ್ಥಾನ ನಿರ್ಮಿಸಲು ಶಕ್ತಿ ನೀಡುವಂತೆ ದೇವರಲ್ಲಿ ಬೇಡಿಕೊಂಡರು.


ಜೀವ ಬಿಟ್ಟ ಪ್ರಾಣಿಯಲ್ಲಿ ದೇವರನ್ನು ಕಂಡ ಗುತ್ತಿಗೆದಾರರ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿರುವುದು ಸಂತಸದ ವಿಷಯವಾಗಿದೆ. ಮಧ್ಯಾಹ್ನ ಮಹಾಮಂಗಳಾರತಿ ಮಾಡಿ ಪಾನಕ,ಮಜ್ಜಿಗೆ, ಕೋಸಂಬರಿ ಮತ್ತು ನೂರಾರು ಜನರಿಗೆ ಅನ್ನ ಸಂತರ್ಪಣೆ ವಿನಿಯೋಗ ನಡೆಯಿತು. ರಸ್ತೆಯಲ್ಲಿ ಸಂಚರಿಸುವ ನೂರಾರು ಜನ ಹಾಗೂ ವಾಹನ ಸವಾರರು ಪ್ರಸಾದವನ್ನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಹದೇವಪುರ ವಲಯ ಆಯುಕ್ತ ರಮೇಶ್, ಇಇ ಚನ್ನಬಸಪ್ಪ ಸಂಘದ ಅಧ್ಯಕ್ಷ ಹನುಮಂತಪ್ಪ, ನಾಗೇಶ್,ರಂಗಸ್ವಾಮಿ ಹಾಗೂ ಗುತ್ತಿಗೆದಾರರ ಸದಸ್ಯರು ಇದ್ದರು.


ಜೀವ ಬಿಟ್ಟ ಪ್ರಾಣಿಯಲ್ಲಿ ದೇವರನ್ನು ಕಂಡ ಗುತ್ತಿಗೆದಾರರು ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿರುವುದು ಸಂತಸದ ವಿಷಯವಾಗಿದೆ.