ಕೆ.ಆರ್.ಪುರ: ಶಾಂತಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಶಾಂತಕೃಷ್ಣಮೂರ್ತಿ ಫೌಂಡೇಷನ್ ನ ಸಂಸ್ಥಾಪಕ ದಿನಾಚರಣೆಯ ಅಂಗವಾಗಿ ರಾಮಮೂರ್ತಿನಗರದ ಕಲ್ಕೆರೆಯಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕ್ಷೇತ್ರದ ಮಂಡಲ ಅಧ್ಯಕ್ಷ ಮುನೇಗೌಡ ಅವರು ಉದ್ಘಾಟಿಸಿದರು.
ಶಾಂತ ಕೃಷಮೂರ್ತಿಯವರು ಮಾತನಾಡಿ,ಎಸ್ ಕೆ ಫೌಂಡೇಶನ್ ನಿಂದಲೂ ನಿರಂತರವಾಗಿ ಬಡವರ, ಆರ್ಥಿಕವಾಗಿ ಹಿಂದುಳಿದವರ, ದೀನದಲಿತರ, ಅಲ್ಪಸಂಖ್ಯಾತರ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದವರ ಪರವಾಗಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸುತ್ತಿದ್ದೇನೆ. ಸದಾ ಕಾಲ ನನ್ನ ಜನಸೇವೆ ಮುಂದುವರೆಯುತ್ತದೆ ಎಂದು ತಿಳಿಸಿದರು
ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ. ಆರೋಗ್ಯ ಕೈಕೊಟ್ಟಾಗ ದುಡಿದ ಹಣ ಒಯ್ದು ಆಸ್ಪತ್ರೆಗೆ ಸುರಿಯುತ್ತೇವೆ. ಪ್ರತಿಯೊಬ್ಬರೂ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ನಿಯಮಿತವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯದ ತಪಾಸಣೆ ಮಾಡಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.
ಇತ್ತೀಚೆಗೆ ಜನರ ಜೀವನಶೈಲಿಯಿಂದಲೇ ಹಲವಾರು ಕಾಯಿಲೆಗಳು ಬರುತ್ತಿವೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಜನರು ಹಿಂದಿನ ಜೀವನಶೈಲಿಗೆ ಮರುಳುವುದು ಉತ್ತಮ ಎಂದು ತಿಳಿಸಿದರು.
ಎಸ್ ಕೆ ಫೌಂಡೇಶನ್ ಸಂಸ್ಥಾಪಕರಾ ಶಾಂತ ಕೃಷ್ಣಮೂರ್ತಿಯವರ ಹುಟ್ಟುಹಬ್ಬದ ಪ್ರಯುಕ್ತ ನೂರಾರು ಆಪ್ತರು, ಕಾರ್ಯಕರ್ತರು ಆಗಮಿಸಿ ಶುಭಾಶಯ ಸಲ್ಲಿಸಿದರು.