ಕೆ.ಆರ್.ಪುರ: ಸಚ್ಚಿದನಂದ ಸದ್ಗುರು ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಳೆಗಟ್ಟಿದ ಗುರು ಪೂರ್ಣಿಮೆ ಸಂಭ್ರಮ
ಸ್ಥಳೀಯ ಸುದ್ದಿ


ಕೆ.ಆರ್.ಪುರ: ನಾಡಿನೆಲ್ಲೆಡೆ ಇಂದು ಗುರು ಪೂರ್ಣಿಮೆ ಸಂಭ್ರಮಾಚರಣೆ ಜೋರಾಗಿದೆ. ಅದರಂತೆ ಕೆ.ಆರ್ ಪುರದ ಆರ್.ಎಂ.ಎಸ್ ಕಾಲೋನಿಯಲ್ಲಿ ಗುರು ಪೂರ್ಣಿಮೆ ಸಂಭ್ರಮ ಜೋರಾಗಿತ್ತು.
ಗುರು ಪೂರ್ಣಿಮೆ ಹಿನ್ನೆಲೆ, ಬಸವನಪುರ ವಾರ್ಡ್ ನ ಆರ್.ಎಂ.ಎಸ್ ಕಾಲೋನಿಯ ಸಚ್ಚಿದನಂದ ಸದ್ಗುರು ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ.
ಅಲ್ಲದೇ ವಿಶೇಷ ಅಲಂಕಾರದಿಂದ ಶಿರಡಿ ಸಾಯಿಬಾಬಾ ಮಂದಿರ ಕಂಗೊಳಿಸುತ್ತಿತ್ತು. ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಆಚರಣೆ ಮಾಡಲಾಗಿದೆ.
ಬೆಳಗ್ಗೆಯಿಂದಲೇ ಸಾಯಿಬಾಬಾರಿಗೆ ವಿಶೇಷ ಕಾಕಡಾರತಿ, ಕ್ಷೀರಾಭಿಷೇಕ, ಗಣಪತಿ ಪೂಜೆ, ಸತ್ಯ ನಾರಾಯಣ ಪೂಜೆ, ನೇವೇದ್ಯಾರತಿ, ಅನ್ನ ಪ್ರಸಾದ ಜರುಗಿತು.
ಬಾಬಾರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಮತ್ತು ಬಿಜೆಪಿ ಯುವ ಮುಖಂಡ ಭಟ್ಟರಹಳ್ಳಿ ರಾಕೇಶ್ ಅವರಿಂದ ಅನ್ನದಾನ ಪ್ರಸಾದ ವಿನಿಯೋಗವನ್ನ ಹಮ್ಮಿಕೊಳ್ಳಾಲಾಗಿತ್ತು.ಬೆಳಗ್ಗೆ ಆರಂಭವಾದ ಅನ್ನದಾನ ರಾತ್ರಿಯವರೆಗೂ ನಡೆಯಿತು.
ಸಾಯಿಬಾಬಾರ ದರ್ಶನ ಪಡೆಯಲು ಬಸವನಪುರ, ಗಾಯತ್ರಿ ಬಡಾವಣೆ,ಅಜಿತ್ ಲೇಔಟ್,ಸೀಗೇಹಳ್ಳಿ,ಭಟ್ಟರಹಳ್ಳಿ,ವಿನಾಯಕ ಬಡಾವಣೆ ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ ದರ್ಶನವನ್ನ ಪಡೆದರು.