ಕೆ.ಆರ್.ಪುರ:ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಕುರಿತು ತರಬೇತಿ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

6/18/20251 min read

ಕೆ.ಆರ್.ಪುರ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ನಿಸರ್ಗರವರ ನೇತೃತ್ವದಲ್ಲಿ 2025 ರ ತೀವ್ರತರ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ (IDCF) ಸಂಬಂಧಿಸಿದಂತೆ ಕ್ಷೇತ್ರ ಸಿಬ್ಬಂದಿಗಳಾದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ರವರು ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ 3 ವಾರ್ಡ್ ( ಬಸವನಪುರ ವಾರ್ಡ್, ಕೃಷ್ಣರಾಜಪುರ ವಾರ್ಡ್, ದೇವಸಂದ್ರ ವಾರ್ಡ್) ಯಲ್ಲಿ ಬರುವ 4 ನಮ್ಮ ಕ್ಲಿನಿಕ್ ಗಳು, 18 ಅಂಗನವಾಡಿ ಗಳಲ್ಲಿ ದಿನಾಂಕ 16- 30 ರವರೆಗೆ ORS CORNER ತೆರೆದು, ಮನೆ ಮನೆ ಭೇಟಿ ನೀಡಿ 0 ಯಿಂದ 5 ವರ್ಷದ ಒಳಗಿನ ಮಕ್ಕಳ ಮನೆಗಳಿಗೆ ಶಿಷ್ಟಾಚಾರದಂತೆ ORS ಜ್ಯೂಸ್ ಮತ್ತು ZINC ಮಾತ್ರೆಗಳನ್ನು ವಿತರಿಸಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಫಾರ್ಮಸಿ ಅಧಿಕಾರಿಗಳಾದ ಡಾ. ಕವಿತ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಶೈಲ ಕನ್ನಾಳ್ , PHCO ಶಶಿಕಲಾ, ಜ್ಯೋತಿ, ಅನುಪಮ, ಮಾಲತಿ HIO ಕಿರಣ್, ಪರಸಪ್ಪ, ಬಂಗಾರಪ್ಪ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಜರಿದ್ದರು