ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ವೈಟ್ ಫೀಲ್ಡ್ ಭಾಗದ ಭೂಮಾಲೀಕರ ವಿರೋಧ. ಕೊಡಿಹಳ್ಳಿ ಚಂದ್ರಶೇಖರ್ ನೇತ್ರತ್ವದಲ್ಲಿ ಸಭೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

4/16/20251 min read

ಮಹದೇವಪುರ: ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 74 ಕಿ.ಮೀ. ಉದ್ದದ ರಸ್ತೆ ನಿರ್ಮಿಸುವ ಯೋಜನೆ ಸುಮಾರು ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್‌ ರಿಂಗ್‌ ರೋಡ್‌ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿದ್ದು ರೈತರಿಗೆ ಭೂಮಿ ಕಳೆದುಕೊಳ್ಳುವ ಆಂತಕ ಹೆಚ್ಚಾಗಿದೆ. ಪೆರಿಫೆರಲ್‌ ರಿಂಗ್‌ ರಸ್ತೆಗೆ ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ಭಾಗದ ವಿವಿಧ ಗ್ರಾಮಗಳಲ್ಲಿ ಬಿಡಿಎ ಭೂಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ.

ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊಡಿಹಳ್ಳಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಾಗೊಂಡಹಳ್ಳಿ ಗ್ರಾಮದ ಕಾಟೇರಮ್ಮ ದೇವಲಯದ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರೈತರಿಗೆ ಹಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು.

ಈ ಕಾಮಗಾರಿಯನ್ನು ಕೈ ಬಿಡಬೇಕು ಇಲ್ಲವೇ ರೈತರಿಗೆ ನ್ಯಾಯಯುತವಾಗಿ ಪರಿಹಾರವನ್ನು ನೀಡಬೇಕು ಎಂದು ಸಾಕಷ್ಟು ಸಭೆ ಮತ್ತು ಹೋರಾಟಗಳನ್ನ ಮಾಡಿದ್ದಾರೆ. ಯಾವುದು ಸಫಲವಾಗದೆ ಈಗ ರೈತ ಸಂಘದ ಕೊಡಿಹಳ್ಳಿ ಚಂದ್ರಶೇಖರ್ ಮುಖಾಂತರ ಹೊರಾಟಕ್ಕೆ ಮುಂದಾಗಿದ್ದಾರೆ.

ಸಭೆಯಲ್ಲಿ ಮಾತನಾಡಿದ ರೈತರು, ಹಲವು ರೈತರಿಗೆ ಮಾಹಿತಿ ನೀಡದೆ ಏಕಾಏಕಿ ದೌರ್ಜನ್ಯ ಮತ್ತು ದರ್ಪದಿಂದ ರೈತರ ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಯಲಹಂಕ ಭಾಗದ ರೈತರನ್ನ ಸಭೆ ಅಂತ ಕರೆಸಿ ಬಲವಂತವಾಗಿ ಸಹಿಗಳನ್ನ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪೆರಿಫೆರಲ್‌ ರಿಂಗ್‌ ರಸ್ತೆ ಹಾದುಹೋಗುವ ಸರ್ವೆ ನಂಬರ್ ಭೂಮಿಯ ಪಹಣಿಗಳಿಗೆ ಕಳೆದ ಒಂದುವರೆ ತಿಂಗಳಿಂದಾಚೆಗೆ ಬೆಂಗಳೂರು ಪ್ರಾಧಿಕಾರಕ್ಕೆ ಒಳಪಟ್ಟಿದೆ ಎಂದು ನಮೂದಿಸಲಾಗಿದೆ ಎಂದು ತಿಳಿಸಿದರು.

ವೈಟ್ ಫೀಲ್ಡ್ ಭಾಗದಲ್ಲಿ ಒಂದು ಎಕರೆ ಭೂಮಿಗೆ ಸೂಮಾರು 40-45 ಕೋಟಿಗೂ ಹೆಚ್ಚು ಬೆಲೆ ಇದೆ. ಆದರೆ ಎಸ್.ಆರ್.ವ್ಯಾಲ್ಯೂ ಪ್ರಕಾರ 49ಲಕ್ಷ ಮಾತ್ರ ನೀಡಲಾಗುವುದು ಎಂದು ರೈತರಲ್ಲಿ ಅಧಿಕಾರಿಗಳು ಗೊಂದಲ ಉಂಟುಮಾಡುತ್ತಿದ್ದಾರೆ‌ ಎಂದು ತಿಳಿಸಿದರು.

ವರ್ತೂರು, ವೈಟ್ ಫೀಲ್ಡ್ ಭಾಗದಗ 18 ಜನ ರೈತರು ತಮ್ಮ ಭೂಮಿಯನ್ನ ಉಳಿಸಿಕೊಳ್ಳಲು ಕೋರ್ಟ್ ಮೊರೆ ಹೊಗಿದ್ದಾರೆ.ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ.ಆದರೆ ನಮಗೆ ನ್ಯಾಯ ನಮ್ಮ ಪರವಾಗಿ ಬರುತ್ತೆ ಎಂಬ ನಂಬಿಕೆ ಇಲ್ಲ ಎಂದು ತಿಳಿಸಿದರು. ವರ್ತೂರು ಮೈನ್ ರೋಡ್ ಗೆ ನೀಡಲಾದ ಜಮೀನುಗಳಿಗೆ ಒಂದು ಅಡಿಗೆ 4 ಸಾವಿರ ನೀಡಲಾಗಿದೆ. ಅದೇ ರೀತಿ ನಮಗೂ ನೀಡುವಂತೆ ಕೋರ್ಟ್ ಗೆ ಅರ್ಜಿದಾರ ತಿಳಿಸಿದ್ದಾರೆ.

2013 ಆಕ್ಟ್ ಭೂಕಾಯಿದೆ ಪ್ರಕಾರ ಭೂಮಿಯ ವ್ಯಾಲ್ಯೂ ನೀಡಬೇಕು ಎಂದು ರೈತರ ಪಟ್ಟು ಹಿಡಿದ್ದಿದ್ದಾರೆ.ಕಳೆದ ಒಂದು ವರ್ಷದಲ್ಲಿ ಭೂಸ್ವಾಧೀನವಾಗುವ ಭೂಮಿಯ ಎಸ್ ಆರ್ ವ್ಯಾಲ್ಯೂ ಶೇಕಡಾ 60 ರಷ್ಟು ಸರ್ಕಾರ ಕಡಿತಗೊಳಿಸಿ, ಭೂಸ್ವಾಧೀನಕ್ಕೆ ಒಳಪಡದ ಭೂಮಿಯ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ಅಧಿಕಾರಿಗಳು ಕಡಿಮೆ ಭೂಮಿಯನ್ನು ಹೊಂದಿರುವ ರೈತರನ್ನ ಮೊದಲು ಸಂಪರ್ಕ ಮಾಡಿ,ಅವರಲ್ಲಿ ಗೊಂದಲ ಹುಟ್ಟಿಸುವ ಕೆಲಸ ಮತ್ತು ಅವರಿಗೆ ಆಶ್ವಾಸನೆ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ನಂತರ ಸಭೆಯನ್ನ ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು,ಈ ಬಿಸಿನೆಸ್ ಕಾರಿಡಾರ್ ಯೋಜನೆ ಪಿಪಿಪಿ ಯೋಜನೆ ಕೆಳಗೆ ಸರ್ಕಾರ ತಗೊಂಡಿದ್ದಾರೆ.ಖಾಸಗಿಯವರ ಸಹಯೋಗದೊಂದಿಗೆ ರಸ್ತೆಯನ್ನ ನಿರ್ಮಾಣ ಮಾಡಲು ಕೈಗೊಂಡಿದ್ದಾರೆ.ಈ ಯೋಜನೆಯಲ್ಲಿ ರೈತರಿಗೆ ಎಷ್ಟು ಸಾಧ್ಯವೋ ಅಷ್ಟು ಪಂಗನಾಮ ಹಾಕಿ ದುಡ್ಡು ಉಳಿಸಿಕೊಳ್ಳಲು ಸಾರ್ಕಾರ ಮುಂದಾಗುತ್ತದೆ ಎಂದು ಹೇಳಿದರು.

ಈ ಯೋಜನೆಯಲ್ಲಿ ಯಾರೆಲ್ಲಾ ರೈತರು ಸಂಬಂಧಿಸಿದ್ದಿರೋ ಅವರೆಲ್ಲಾ ಸ್ವಲ್ಪ ಎತ್ತೆಚ್ಚುಕೊಂಡು ಸರ್ಕಾರದ ವಿರುದ್ದ ಹೋರಾಟ ಮಾಡಿ ತಮ್ಮ ಭೂಮಿಯನ್ನ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಸರ್ಕಾರದ ಜೊತೆ ಮಾತನಾಡಬೇಕಾದರೆ ನಿವೆಲ್ಲಾರೂ ಬರಬೇಕು ನಿಮ್ಮೆಲ್ಲಾರ ಒಗ್ಗಟ್ಟು ಇದ್ದರೆ ಹೋರಾಟ ಮಾಡಲು ಶಕ್ತಿ ಬರುತ್ತೆ ಎಂದು ತಿಳಿಸಿದರು.

ಸರ್ಕಾರದವರಿಗೆ ಇದು ಒಂದು ಬಿಸಿನೆಸ್ ಕಾರಿಡಾರ್ ರೈತರಿಗೆ ಅಲ್ಲ, ಇದನ್ನ ನುಂಗಿ ನೀರು ಕುಡಿಯಲು ತುಂಬಾ ಸ್ಪೀಡಪ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ನಾನು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮಾತನಾಡುತ್ತೇನೆ.ಈ ಕಾರಿಡಾರ್ ಯೋಜನೆ ಸರಿ ಇಲ್ಲ,ಇಲ್ಲವೇ ರೈತರಿಗೆ ಸರಬೇಕಾದದ್ದು ಪರಿಹಾರ ಸರಿಯಾಗಿ ಕೊಡುವುದಾದರೆ ಕೊಡಿ ಎಂದು ಮಾತನಾಡುತೇನೆ ಎಂದರು. ಆದಷ್ಟು ಬೇಗ ಸಿಎಂ ಅವರ ಜೊತೆಗೆ ಅಥವಾ ಬಿಡಿಎ ಅಧ್ಯಕ್ಷರು, ಕಮಿಷನರ್ ಬಳಿ ಮಾತನಾಡಲು ಒಂದು ಸಭೆಯನ್ನ ಏರ್ಪಡಿಸಿ ನಾವೆಲ್ಲರೂ ಭಾಗಿಯಾಗೋಣ ಎಂದರು.

ಸರ್ಕಾರ ಮಾಡುತ್ತಿರುವುದು ಬಿಸಿನೆಸ್ ಕಾರಿಡಾರ್ ರೈತರಿಗೂ ಬಿಸಿನೆಸ್ ತರನೇ ಪರಿಹಾರ ಬರಲೀ ಬಿಡಿ ಅದರಲ್ಲಿ ತಪ್ಪೇನು ಎಂದು ಹೇಳಿದರು. ನಾವೂ ಏನೇ ಮಾಡಿದರೂ ಕಾನೂನು ಪ್ರಕಾರ ಮಾಡೋಣ, ಯಾರಿಗೂ ಮೋಸ , ವಂಚನೆ ಮಾಡೋದು ಏನು ಇಲ್ಲಾ ನಿಮಗೂ ಸರಿಯಾದ ರೀತಿಯಲ್ಲಿ ಪರಿಹಾರ ಸಿಗಲಿ ಎಂದು ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬಿದರು.

ನಾವೆಲ್ಲಾ ಸರಿಯಾದ ಮಾರ್ಗದಲ್ಲಿ ನಡೆದು ರೈತರಿಗೆ ಒಳ್ಳೆಯದು ಆಗುವ ಹಾಗೆ ಸರ್ಕಾರದ ಬಳಿ ಮಾತನಾಡೋಣ ಇದರಲ್ಲಿ ನಾವು ಗೆಲ್ಲುತೇವೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಬೈರೆಗೌಡ, ರೈತರಾದ ನಾಗೊಂಡಹಳ್ಳಿ ಮಧು, ಸುರೇಶ್,ರಘು ಮತ್ತಿರರು ಇದ್ದರು.