ಮಹದೇವಪುರ: ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ.
ಸ್ಥಳೀಯ ಸುದ್ದಿ


ಮಹದೇವಪುರ: ಕ್ಷೇತ್ರದ ಗ್ರಾಮಾಂತರ ಪ್ರದೇಶದ ಮಾರಗೊಂಡನಹಳ್ಳಿ,ರಾಂಪುರ,ಬೈಪನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಚರಂಡಿ, ರಸ್ತೆ ಮತ್ತು ಅಡ್ಡ ರಸ್ತೆ ಗಳಿಗೆ ಲೋಕೋಪಯೋಗಿ ಅನುದಾನದ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ಚಾಲನೆ ನೀಡಿದರು.
ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿ, ಬಿದರಹಳ್ಳಿಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು. ಮಹದೇವಪುರ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಪಿಳ್ಳಪ್ಪ,ಮಾಜಿ ಅಧ್ಯಕ್ಷ ನಟರಾಜ್,ಮಾಜಿ ಜಿಪಂ ಸದಸ್ಯ ಗಣೇಶ,ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾಮಾರುತಿಕುಮಾ ರ್, ಬಿದರಹಳ್ಳಿ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಜಿ.ರಾಜೇಶ್, ಮುಖಂಡರಾದನಟರಾಜ್, ರಾಂಪುರ ವೇಣುಗೋಪಾಲ,ಬೈರತಿ ರಮೇಶ್, ಚಂದ್ರಪ್ಪ,ಮಹೇಶ್,ಮೋಹನ್ ರೆಡ್ಡಿ, ದನುಂಜಯ್, ಗೋಪಾಲಗೌಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.