ಮಕರ ಸಂಕ್ರಾಂತಿ ಹಬ್ಬ: ಕೆ.ಆರ್.ಪುರದಲ್ಲಿ ರಾಸುಗಳ ಮೆರೆವಣಿಗೆ ಸ್ಪರ್ಧೆಗೆ ಕರೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

1/14/20261 min read

ಕೆ.ಆ‌ರ್.ಪುರ: ಕೃಷ್ಣರಾಜಪುರ ಗ್ರಾಮದಲ್ಲಿ ಅನಾಧಿಕಾಲದಿಂದಲೂ ಉತ್ತರಾಯಣ ಪುಣ್ಯ ಕಾಲವಾದ ಈ “ಸಂಕ್ರಾಂತಿ” ಹಬ್ಬವನ್ನು ಸಾಂಪ್ರದಾಯಕ ರೀತಿಯಲ್ಲಿ ರಾಸುಗಳನ್ನು ಸಿಂಗರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಗ್ರಾಮದಲ್ಲಿ ಎಲ್ಲರು ಉತ್ಸಾಹದಿಂದ ಹಬ್ಬವನ್ನು ಆಚರಿಸುತ್ತಿದ್ದರು.

ಹಳೆಯ ನೆನಪುಗಳು ಮರುಕಳಿಸುವ ಸಲುವಾಗಿ ಈ ವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಬೇಕೆಂದು ತೀರ್ಮಾನಿಸಿರುವ ಸಲುವಾಗಿ ಗುರುವಾರ ಸಂಜೆ 3-00 ಘಂಟೆಗೆ ಸರಿಯಾಗಿ ಗ್ರಾಮದಲ್ಲಿರುವ ಹಸು, ಕರು ಮತ್ತು ಎಮ್ಮೆ ಮುಂತಾದ ಜಾನುವಾರಗಳನ್ನು ಅಲಂಕರಿಸಿ ತಂದು ತಮಟೆ, ಕಿಲುಕುದರೆ, ಗಾರುಡಿ ಬೊಂಬೆ, ಬ್ಯಾಂಡ್‌ಸೆಟ್‌ಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ದನಕರುಗಳ ಸ್ಪರ್ದೆ ಏರ್ಪಡಿಸಲಾಗಿದೆ.

ಮೊದಲ ಬಹುಮಾನ 10,000 ರೂ. + ಟ್ರೋಫಿ, ದ್ವಿತೀಯ ಬಹುಮಾನ 5,000 ರೂ. + ಟ್ರೋಫಿ, ತೃತೀಯ ಬಹುಮಾನ 3,000 ರೂ. + ಟ್ರೋಫಿ ಹಾಗು ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ದನಕರುಗಳಿಗೆ ಸಮಾಧಾನಕರ ನಗದು ಬಹುಮಾನ ನೀಡಲಾಗುವುದು ಹಾಗೂ ಸ್ನೇಹ ಮತ್ತು ಪ್ರೀತಿಯ ಸಂಕೇತವಾಗಿ ಸುಮಾರು 5000 ಜನರಿಗೆ ಎಳ್ಳು ಬೆಲ್ಲ ವಿತರಿಸಲಾಗುತ್ತದೆ ಎಂದು ಕಾರ್ಯಕ್ರಮಗಳ ಪ್ರಾಯೋಜಕರು ಹಾಗು ಕೆ ಆರ್ ಪುರ ಗ್ರಾಮದ ಸಮಾಜ ಸೇವಕರಾದ ಕೆ.ಹೆಮಂತ್ (ಚಿನ್ನಿ) ರವರು ತಿಳಿದಿದ್ದಾರೆ.

ದನಕರುಗಳ ಮೆರವಣಿಗೆ ಶ್ರೀ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾದು ಶ್ರೀ ಮಹಾಬಲ್ಲೇಶ್ವರ ಸ್ವಾಮಿ ದೇವಾಲಯದ ಹತ್ತಿರ ಬಂದು ಅಲ್ಲಿ ರಾಸುಗಳಿಗೆ ಮೇವು ನೀಡುವುದು. ಎಳ್ಳು ಬೆಲ್ಲ ಹಾಗೂ ಬಹುಮಾನ ನಂತರ ಪ್ರಸಾದ ವಿತರಣೆ ನಂತರ ಕಾಲೇಜ್ ರಸ್ತೆಯಲ್ಲಿ ಕಿಚ್ಚನ್ನು ಹಾಯಿಸಿ ಸಮಾರೂಪ ಮಾಡಲಾಗುವುದು. ಆದ್ದರಿಂದ ಗ್ರಾಮಸ್ಥರಾದ ತಾವೆಲ್ಲರೂ ಕುಟುಂಬ ಪರಿವಾರ ಸಮೇತರಾಗಿ ಈ ಮೆರವಣಿಗೆಯಲ್ಲಿ ಭಾಗವಹಿಸಿ ಬಹುಮಾನ ಮತ್ತು ಟ್ರೋಪಿಯನ್ನು ಪಡೆಯಲು ಹಾಗೂ ಸಂಕ್ರಾಂತಿ ಹಬ್ಬವನ್ನು ಸಂಬ್ರಮದಿಂದ ಆಚರಿಸಲು ಮನವಿ ಮಾಡಲಾಗಿದೆ.