ತಂದೆಯ ಚಿಕಿತ್ಸೆಗಾಗಿ ಬೈಕ್ ಗಳ ಕಳ್ಳತನ: ವ್ಯಕ್ತಿ ಬಂಧನ

ಸ್ಥಳೀಯ ಸುದ್ದಿಕ್ರೈಮ್

ಧರ್ಮ ಬಸವನಪುರ.

9/24/20251 min read

ಬೆಂಗಳೂರು : ಮನೆ ಮುಂಭಾಗ ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡು ತ್ತಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ವೈಟ್ ‌ ಫೀಲ್ಡ್ ‌ ಠಾಣೆ ಪೊಲೀಸರು ಬಂಧಿಸಿದ್ದಾರೆ .

ಆಂಧ್ರಪ್ರದೇಶದ ಅನಂತ ಪುರದ ಫಿರೋಜ್ ‌ (24) ಬಂಧಿತ . ಆರೋಪಿಯಿಂದ 20 ಲಕ್ಷ ರೂ . ಮೌಲ್ಯದ ವಿವಿಧ ಕಂಪನಿಯ 20 ಬೈಕ್ ‌ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು .

ವೃತ್ತಿಯಲ್ಲಿ ಚಾಲಕನಾಗಿರುವ ಫಿರೋಜ್ ‌, ಪತ್ನಿ ಹಾಗೂ ಮಗು ಜತೆ ಹೊಸಕೋಟೆಯ ಅನುಗೊಂಡನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ . ಈ ನಡುವೆ ಆರೋಪಿಯ ತಂದೆ ಮೊಹಮ್ಮದ್ ‌ ಪಾಷಾ ಕ್ಯಾನ್ಸರ್ ‌ ಕಾಯಿಲೆಗೆ ತುತ್ತಾಗಿ ದ್ದರು . ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಪರದಾಟ ನಡೆಸಿದ್ದ ಫಿರೋಜ್ ‌, ಒಮ್ಮೆ ದ್ವಿಚಕ್ರ ವಾಹನವೊಂದನನ್ನು ಕಳವು ಮಾಡಿ ಮಾರಾಟ ಮಾಡುವುದರಲ್ಲಿ ಯಶಸ್ವಿಯಾಗಿದ್ದ .

ನಂತರ ಕಳ್ಳತನವನ್ನೇ ಕಾಯಕ ಮಾಡಿಕೊಂಡ ಆರೋಪಿಯು ಪಾರ್ಕಿಂಗ್‌ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿ, ಮಂಡ್ಯ ಮತ್ತು ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದನು. ಕೊನೆಗೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 12 ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಿದ್ದು, ಇನ್ನುಳಿದ 8 ವಾಹನಗಳ ಮಾಲೀಕರು ಪತ್ತೆಯಾಗಬೇಕಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಸೆ.9ರಂದು ವಿಜಯನಗರದ ನಿವಾಸಿಯೊಬ್ಬರು ಮಾರಮ್ಮ ದೇವಸ್ಥಾನದ ಬಳಿ ವಾಹನವೊಂದನ್ನು ನಿಲುಗಡೆ ಮಾಡಿ ತೆರಳಿದ್ದರು. ವಾಪಸ್ ಬಂದು ನೋಡುವಾಗ ಆ ಸ್ಥಳದಲ್ಲಿ ದ್ವಿಚಕ್ರ ವಾಹನ ಇರಲಿಲ್ಲ. ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು. 12 ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಿದ್ದು, ಉಳಿದ 8 ವಾಹನಗಳ ಮಾಲೀಕರು ಪತ್ತೆ ಆಗಬೇಕಿದೆ ಎಂದು ಅವರು ಮಾಹಿತಿ ನೀಡಿದರು.