ಮಂಗಳೂರು: ಸೆಮಿನಾರ್ ತಪ್ಪಿಸಲು ಕಾಲೇಜು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ ಮೆಡಿಕಲ್ ವಿದ್ಯಾರ್ಥಿನಿ.
ಜಿಲ್ಲಾ ಸುದ್ದಿರಾಜ್ಯ


ಮಂಗಳೂರು/ಉಳ್ಳಾಲ: ನಾಟೆಕಲ್‌ನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಬಾಂಬು ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿರುವ ಪ್ರಕರಣಕ್ಕೆ ಸಂಬಂಧಿಸಿ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಅದೇ ಕಾಲೇಜಿನ ವಿದ್ಯಾರ್ಥಿನಿ ಡಾ. ಚಲಸಾನಿ ಮೋನಿಕಾ ಚೌಧರಿ ಎಂದು ಗುರುತಿಸಲಾಗಿದೆ. ಸೆಮಿನಾರ್ ತಪ್ಪಿಸಲು ಈಕೆ ಹುಸಿ ಬಾಂಬ್ ಕರೆ ಮಾಡಿದ್ದಳು ಎನ್ನಲಾಗಿದೆ.
ಸಮಿನಾರ್ನಿಂದ ತಪ್ಪಿಸಿಕೊಳ್ಳಲು ಮೋನಿಕಾ ಜೂನ್ 4ರ ಬೆಳಗ್ಗೆ 8.15ಕ್ಕೆ ತಾನು ಓದುತ್ತಿರುವ ಕಣಚೂರು ಮೆಡಿಕಲ್ ಕಾಲೇಜಿನ ಹೆರಿಗೆ ವಾರ್ಡ್ನ ಸ್ಥಿರ ದೂರವಾಣಿಗೆ ಕರೆ ಮಾಡಿ, “ಬೆಳಗ್ಗೆ 11ಕ್ಕೆ ಕಣಚೂರು ಆಸ್ಪತ್ರೆ ಸ್ಫೋಟಿಸುವುದಾಗಿ” ಬೆದರಿಕೆ ಹಾಕಿದ್ದಾರೆ.
ಪೊಲೀಸರು ನಡೆಸಿದ ವಿಚಾರಣೆ ವೇಳೆ ಪಿ.ಜಿ. ವಿದ್ಯಾರ್ಥಿನಿ ಅದೇ ದಿನ ಕಾಲೇಜಿನಲ್ಲಿ ಸೆಮಿನಾರ್ ನೀಡಬೇಕಿದ್ದು ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಬಾಂಬ್ ಬೆದರಿಕೆಯ ನಾಟಕವಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದು ಆಕೆಯ ಬಳಿಯಿದ್ದ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.