ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಲು ಮ್ಯಾರಥಾನ್ ಓಟ
ಸ್ಥಳೀಯ ಸುದ್ದಿ


ಕೆಆರ್ ಪುರ: ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಆರೋಹಣಾ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಸಹಕಾರದಲ್ಲಿ ಕೆಆರ್ ಪುರದಲ್ಲಿ 5 ಕಿ.ಮೀ ಜಾಗೃತಿ ಜಾಥಾವನ್ನು ಭಾನುವಾರ ಡಿ.14 ಹಮ್ಮಿಕೊಳ್ಳಲಾಗಿದೆ.
ಕ್ಷೇತ್ರದ ಎನ್ ಆರ್ ಐ ಬಡಾವಣೆಯಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಲೋಗೊ ಅನಾವರಣ ಮಾಡಿ ಮಾತನಾಡಿದ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ಅಧ್ಯಕ್ಷೆ ಶಾಂತಕೃಷ್ಣಮೂರ್ತಿ ಅವರು ನಾಳೆ ನಡೆಯಲಿರುವ ಮ್ಯಾರಥಾನ್ ಅನ್ನು ಶಾಸಕ ಬೈರತಿ ಬಸವರಾಜ ನಟಿ ಸಪ್ತಮಿ ಗೌಡ, ಪರ್ವತ ರೋಹಣಿ ಭಾಗ್ಯಶ್ರೀ ಸಾವಂತ್ ,ಜಿಬಿಎ ಆಯುಕ್ತ ಮಹೇಶ್ವರ ರಾವ್ , ಡಿಸಿಪಿ ಹರಿಬಾಬು ಅವರು ಉದ್ಘಾಟಿಸಲಿದ್ದು, ಶಾಲಾ , ಕಾಲೇಜ್ ವಿಧ್ಯಾರ್ಥಿಗಳು , ಸ್ಥಳೀಯ ನಾಗರೀಕರು ಹಾಗೂ ಸೇರಿದಂತೆ ಆನೇಕರು ಮ್ಯಾರಥಾನ್ ಕ್ರೀಡಾ ಪಟುಗಳು ಭಾಗಿಯಾಗಲಿದ್ದಾರೆ. ದೇಶದ ಆಸ್ತಿಯಾಗಿರುವ ಯುವ ಸಮೂಹ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ , ಪೋಷಕರ ಹಾಗೂ ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವ ಸಲುವಾಗಿ ಈ ಜಾಥಾವನ್ನು ಕೈಗೊಂಡಿದ್ದೇವೆ , ಜಾಗೃತಿ ತರಲು ಹೊಸ ಯೋಜನೆಗಳನ್ನು ರೂಪಿಸುತ್ತಿರುತ್ತದೆ ಎಂದು ವಿವರಿಸಿದರು .
ಪೃಥ್ವಿ ಕೃಷ್ಣಮೂರ್ತಿ ಅವರು ಮಾತನಾಡಿ ಎನ್ ಆರ್ ಐ ಲೇಔಟ್ ಬಳಿಯ ಜುಬಿಲಿ ಸ್ಕೂಲ್ ನಿಂದ ಆರಂಭವಾಗುವ ಜಾಥಾದಲ್ಲಿ ಐದು ಸಾವಿರಾರಕ್ಕೂ ಜನರು ಭಾಗಿಯಾಗಲ್ಲಿದ್ದರಾರೆ , ಬಳಿಕ ಸಾರ್ವಜನಿಕ ನಾಟಕಗಳ ಮುಖಾಂತರವೂ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ಅಧ್ಯಕ್ಷರಾದ ಕೃಷ್ಣಮೂರ್ತಿ ಸದಸ್ಯರಾದ ಆನಂದ್ , ವಿಜಯ್ , ಸಂಪತ್ ಮೈಕಲ್ ಇದ್ದರು .