ಮೆಡಿಕವರ್ ಆಸ್ಪತ್ರೆ, ಬೆಂಗಳೂರು ಘಟಕದಲ್ಲಿ ಇಂದು ಬೆಳಿಗ್ಗೆ ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರವನ್ನು ಭವ್ಯವಾಗಿ ಉದ್ಘಾಟಿಸಲಾಯಿತು.
ಜಿಲ್ಲಾ ಸುದ್ದಿಕ್ರೈಮ್ದೇಶ/ವಿದೇಶ


ಬೆಂಗಳೂರು: ವೈಟ್ ಫೀಲ್ದ್ – ಮೆಡಿಕವರ್ ಆಸ್ಪತ್ರೆ, ಬೆಂಗಳೂರು ಘಟಕದಲ್ಲಿ ಇಂದು ಬೆಳಿಗ್ಗೆ ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರವನ್ನು ಭವ್ಯವಾಗಿ ಉದ್ಘಾಟಿಸಲಾಯಿತು. ನೂತನ ಕೇಂದ್ರವು ಸಂಯೋಜಿತ ರೋಬೊಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಪರಿಚಯಿಸಿ, ಮೂಳೆ-ಸಂಧಿ ಚಿಕಿತ್ಸೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ.
ಆರ್ಥೋ ವಿಂಗ್‌ನ ನಡೆದ ಈ ಕಾರ್ಯಕ್ರಮದಲ್ಲಿ, ಆಸ್ಪತ್ರೆಯ ಮುಖ್ಯಸ್ಥರಾದ ಕೃಷ್ಣಮೂರ್ತಿ ಜಿ, ಮಾರ್ಕೆಟಿಂಗ್ ವಿಭಾದ ಮುಖ್ಯಸ್ಥ ಪ್ರಮೋದ್ ಯು, ಆಸ್ಪತ್ರೆಯ ಹಿರಿಯ ಮೂಳೆ ತಜ್ಞರಾದ ಆರ್ ಡಿ ಚಕ್ರವರ್ತಿ, ಸಂಜಯ್ ಹೆಗಡೆ, ರವೀಂದ್ರ ಪುಟ್ಟಸ್ವಾಮಯ್ಯ, ಕೃಷ್ಣಕುಮಾರ್ ಹಾಗೂ ರಾಘವೇಂದ್ರ ರೆಡ್ಡಿಯವರು ಭಾಗವಹಿಸಿ ಕೇಂದ್ರವನ್ನು ಉದ್ಘಾಟಿಸಿದರು. ಈ ಮೂಲಕ ಹೆಚ್ಚು ನಿಖರತೆ, ಕಡಿಮೆ ಪುನಶ್ಚೇತನ ಸಮಯ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆ ಫಲಿತಾಂಶಗಳನ್ನು ಸಾಧಿಸುವ ಉದ್ದೇಶವಿದೆ.
ಮೆಡಿಕವರ್ ಆಸ್ಪತ್ರೆಯ ಮುಖ್ಯಸ್ಥರಾದ ಕೃಷ್ಣಮೂರ್ತಿ ಅವರು ಮಾತನಾಡಿ, ಈ ರೋಬೊಟಿಕ್ ತಂತ್ರಜ್ಞಾನದಿಂದ ನಾವು ಹೆಚ್ಚು ನಿಖರವಾದ ಶಸ್ತ್ರಚಿಕಿತ್ಸೆ ನಡೆಸಬಹುದು. ಇದು ನೂರಾರು ಸಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಶಾದಾಯಕವಾಗಿದೆ ಎಂದು ತಿಳಿಸಿದರು.