ಮೆಡಿಕವರ್ ಆಸ್ಪತ್ರೆ – ವರ್ಲ್ಡ್ ಹಾರ್ಟ್ ಡೇ ಅಂಗವಾಗಿ ವಾಕ್‌ಥಾನ್

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

9/30/20251 min read

ಬೆಂಗಳೂರು: ಮೆಡಿಕವರ್ ಆಸ್ಪತ್ರೆ, ವೈಟ್‌ಫೀಲ್ಡ್ ನಲ್ಲಿ ವರ್ಲ್ಡ್ ಹಾರ್ಟ್ ಡೇ ಪ್ರಯುಕ್ತ ವಾಕ್‌ಥಾನ್ ಆಯೋಜಿಸಲಾಯಿತು. ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ತಡೆಗಟ್ಟುವ ಜೀವನಶೈಲಿಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಬೆಳಿಗ್ಗೆ 6:30 ಗಂಟೆಗೆ ಆಸ್ಪತ್ರೆ ಆವರಣದಿಂದ ವಾಕ್‌ಥಾನ್‌ಗೆ ಚಾಲನೆ ದೊರೆತು, ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಮುದಾಯದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು. ಒಟ್ಟು 2 ಕಿಮೀ ವಾಕ್‌ಥಾನ್ ನಡೆಯಿತು.

ಯುನಿಟ್ ಹೆಡ್ ಕೃಷ್ಣಮೂರ್ತಿ ಸ್ವಾಗತ ಭಾಷಣ ಮಾಡಿದರು. ಡಾ. ನಾಗ ಶ್ರೀನಿವಾಸ್ ವರ್ಲ್ಡ್ ಹಾರ್ಟ್ ಡೇ ಮಹತ್ವ ಮತ್ತು ವಾಕ್‌ಥಾನ್ ಉದ್ದೇಶವನ್ನು ವಿವರಿಸಿದರು. ಹೃದಯ ತಜ್ಞರಾದ ಡಾ. ರಾಘವೇಂದ್ರ ಚಿಕಟೂರು ಮತ್ತು ಡಾ. ಮೇಜರ್ ಜಯಪ್ರಸಾದ ಸಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಈ ಕಾರ್ಯಕ್ರಮಕ್ಕೆ ಸನ್ ಫಾರ್ಮಾ ಮುಖ್ಯ ಪ್ರಾಯೋಜಕರಾಗಿದ್ದು, ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮ ಸಹಭಾಗಿಯಾಗಿತ್ತು.