ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ನ ಸಮಸ್ಯೆಯಿಲ್ಲಾ ರಾಜ್ಯದ ಜನತೆ ಆತಂಕ ಪಡಬೇಡಿ ಎಂದ ಸಚಿವ ಕೆ.ಹೆಚ್.ಮುನಿಯಪ್ಪ .
ಸ್ಥಳೀಯ ಸುದ್ದಿ


ಬೆಂಗಳೂರು: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿಂದು ವಸಂತನಗರದ ಆಹಾರ ಭವನದಲ್ಲಿ IOC ,BPC,HPC,GAIL ನ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ, ಗೃಹ ಉಪಯೋಗಿ ಅನಿಲದ ಬಗ್ಗೆ ಜನರ ಆತಂಕದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ನಂತರ ಮಾತನಾಡಿದ ಸಚಿವರು ಇರಾನ್ ಮತ್ತು ಇಸ್ರೇಲ್ ದೇಶಗಳ ಮಧ್ಯೆ ಯುದ್ದ ನಡೆಯುತ್ತಿದ್ದು ಅರಬ್ ರಾಷ್ಟ್ರಗಳಾದ ಯುಎಸ್ಎ ,ಗಲ್ಪ್ ,ರಷ್ಯಾದ ದೇಶಗಳಿಂದ ನಮ್ಮ ದೇಶಕ್ಕೆ ಅನಿಲ ಉತ್ಪನ್ನಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ದದ ಕಾರಣದಿಂದ ಅನಿಲದ ವೆಸೆಲ್ (ಶಿಪ್ ಗಳಿಗೆ) ಹಾನಿ ಉಂಟಾದ ಹಿನ್ನಲೆಯಲ್ಲಿ ನಮಗೆ ಅನಿಲ ಸಮಸ್ಯೆ ಉಂಟಾಗಿದ್ದು ಗ್ರಾಹಕರು ಯಾವುದೆ ಆತಂಕಕ್ಕೆ ಒಳಗಾಗಬಾರದು ಎಂದರು ಮನವಿ ಮಾಡಿದರು.
ಸಾಮಾನ್ಯವಾಗಿ ಜನರು ಉಪಯೋಗಿಸುವ ಡೊಮೆಸ್ಟಿಕ್ ಗ್ಯಾಸ್ ಮತ್ತು ಕಮರ್ಷಿಯಲ್ ಗ್ಯಾಸ್ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಸುಮಾರು 1000 ಮೆಟ್ರಿಕ್ ಟನ್ ಅಂದ್ರೆ ಒಂದು ದಿನಕ್ಕೆ ಸುಮಾರು 50,000 ಕಮರ್ಷಿಯಲ್ ಸಿಲಿಂಡರ್ಸ್ (19 kg) ಬೇಕಾಗುತ್ತದೆ. ಡೊಮೆಸ್ಟಿಕ್ ಬಳಕೆಗೆ ಸುಮಾರು 5,000 ಮೆಟ್ರಿಕ್ ಟನ್ ಅಂದ್ರೆ ದಿನಕ್ಕೆ ಸುಮಾರು 3,50,000 ಸಿಲಿಂಡರ್ಸ್ (14.2 kg) ಬೇಕಾಗುತ್ತದೆ. ಇದು ಕರ್ನಾಟಕ ರಾಜ್ಯದ ಪ್ರತಿ ದಿನದ ಅವಶ್ಯಕತೆಯಾಗಿದೆ.
ಭಾರತದಲ್ಲಿ ಸುಮಾರು 30% ಮಾತ್ರ ಉತ್ಪಾದನೆ ಇದೆ. ಉಳಿದ 60 ರಿಂದ 70% ನಾವು ಆಮದು ಮಾಡಿಕೊಳ್ಳುತ್ತುದ್ದೇವೆ. ಅಮೇರಿಕಾ, ಗಲ್ಬ್ ಅರೇಬಿಯನ್ ಮತ್ತು ರಷ್ಯಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಯುದ್ಧದ ಪರಿಸ್ಥಿತಿಯಿಂದ ವೆಸಲ್ಸ್ ಬರೋದು ಸ್ವಲ್ಪ ತಡವಾಗುತ್ತಿದೆ.
ಆದರೂ ಜನರು ಆತಂಕ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರದ ಸೂಚನೆಯಂತೆ ಒಂದು ಕುಟುಂಬದ ಬಳಕೆಗೆ 25 ದಿನಕ್ಕೆ ಒಂದು ಸಿಲಿಂಡರ್ ನೀಡಲಾಗುತ್ತದೆ. ಹಳ್ಳಿಗಳಾಗಲಿ ನಗರದಲ್ಲಿರಲಿ ಜನರು ಮಿತವಾಗಿ ಗ್ಯಾಸ್ ನ್ನು ಉಪಯೋಗಿಸಬೇಕು. ತೀರಾ ಅವಶ್ಯಕತೆ ಇದ್ದದ್ದನ್ನು ಮಾತ್ರ ಬಳಸಬೇಕು. ಆತಂಕಪಟ್ಟು ಗ್ರಾಹಕರು ಹೆಚ್ಚು ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಆಯಿಲ್ ಕಂಪನಿಗಳ ಜೊತೆ ಸಹಕರಿಸಬೇಕೆಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದರು.
ಕಮರ್ಷಿಯಲ್ ಬಳಕೆಯಲ್ಲಿ ಸ್ವಲ್ಪ ಕಷ್ಟವಾಗಬಹುದು ಯಾಕಂದರೆ ಮೊದಲು ಮನೆ ಬಳಕೆಗೆ ಆದ್ಯತೆ ನೀಡಿ ಕಮರ್ಷಿಯಲ್ ಸಿಲಿಂಡರ್ ವಿಚಾರದಲ್ಲಿ ಅತ್ಯಂತ ಹೆಚ್ಚು ಆದ್ಯತೆ ಮೇರೆಗೆ ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಸರಬರಾಜುನಲ್ಲಿ ವ್ಯತೆಯಾಗದಂತೆ ನೋಡಿಕೊಂಡು ನಂತರ ಹೋಟೆಲ್ ಕಲ್ಯಾಣ ಮಂಟಪಗಳಿಗೆ ಕಷ್ಟವಿದ್ದು ಆದ್ಯತೆಯ ಮೇರೆಗೆ ಸಿಲಿಂಡರ್ ಗಳನ್ನು ವಿತರಿಸಲಾಗುವುದು ಎಂದರು
ಈ ಕಠಿಣ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲು ಸರ್ಕಾರದ ಕಾರ್ಯದರ್ಶಿ ಅಂತದಲ್ಲಿ ಪ್ರತಿವಾರ ಆಯಿಲ್ ಕಂಪನಿಗಳ ಜೊತೆ ಸಭೆ ನಡೆಯಲು ಸೂಚಿಸಿದ್ದು ಜನರು ಆತಂಕಪಡದೆ ಮಿತವಾಗಿ ಉಪಯೋಗಿಸಿದರೆ ಯಾವುದೇ ದೊಡ್ಡ ಸಮಸ್ಯೆ ಎದುರಾಗುವುದಿಲ್ಲ ಎಂದರು
ಮಿತ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಗ್ಯಾಸ್ ಉತ್ಪನ್ನ ಗಳ ಬಳಕೆ ಮಿತವಾಗಿರಲಿ ನಾವು ಮಿತ ಬಳಕೆಯಿಂದ ಅನಿಲ ಉಳಿಸಲು ಸಹಕಾರಿಯಾಗಲಿದೆ ಎಂದರು ಒಂದು ಸಿಲಿಂಡರ್ ಒಂದು ಕುಟುಂಬದ ನಾಲ್ಕು ಸದಸ್ಯರಿದ್ದರೆ 21 ದಿನಗಳ ಬಳಕೆಗೆ ಅನುಕೂಲವಾಗಲಿದ್ದು ಅದು 14 ಕೆಜಿ ಗ್ಯಾಸ್ ಹೊಂದಿರುತ್ತದೆ.
ಇಲಾಖೆಯ ವತಿಯಿಂದ ಅನಿಲ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗುತ್ತದೆ ಗ್ರಾಹಕರು ಯಾವುದೆ ಗೊಂದಲಕ್ಕೆ ಒಳಗಾಗದೆ ಇರಲು ತಿಳಿಸಿದರು
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತರಾದ ರವಿಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್,ಅರುಂದಿ ಗೊಯಲ್,ದಿವ್ಯ, ಮುರಳಿ ಚಾರ್,ಸುಬ್ರತ್ ಚಟರ್ಜಿ,ರಾಜೇಶ್ ಸಿಂಗ್,ಸಂಜಯ್ ಕುಮಾರ್ ಸಿಂಗ್,ಪ್ರಣಯ ದೇವನಾಗನ್,ರವಿಕುಮಾರ್ ತಂಡಲ್,ಪ್ರಸೂನ್ ಮಾಲಿ ಹಾಗೂ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.