ಗುಣಮಟ್ಟ ಕಾಮಗಾರಿಗೆ ಆದ್ಯತೆ ನೀಡಿ ಶಾಸಕ ಬೈರತಿ ಬಸವರಾಜ್

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

10/23/20251 min read

ಕೆ.ಆರ್.ಪುರ: ಹತ್ತಾರು ವರ್ಷ ಬಾಳಿಕೆ ಬರುವಂತೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಶಾಸಕ ಬೈರತಿ ಬಸವರಾಜ್ ಹೇಳಿದರು.

ಹೊರಮಾವು ವಾರ್ಡ್ ನ ಚೇಳಕೆರೆಯ ಅರ್ಕಾವತಿ ಬಡಾವಣೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಕಾಮಗಾರಿ ನಡೆಯುವಾಗ ಸ್ಥಳೀಯ ಮುಖಂಡರು ಮತ್ತು ಬಡಾವಣೆಯ ಅಸೋಸಿಯೇಷನ್ ನವರು ಗಮನ ಹರಿಸಬೇಕು. ಕಳಪೆ ಕಂಡುಬಂದರೆ ತಡೆದು ಉತ್ತಮ ರೀತಿಯಲ್ಲಿ ನಡೆಸುವಂತೆ ಸೂಚಿಸಬೇಕು ಎಂದು ಹೇಳಿದರು.

ಕಳೆದ ಹತ್ತಾರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿ ನೀರು ನಿಲ್ಲದಂತೆ ಗುಣಮಟ್ಟ ಕಾಯ್ದುಕೊಂಡು ಉತ್ತಮ ಕಾಮಗಾರಿ ಮಾಡಿ ಶಾಸಕ ಬೈರತಿ ಬಸವರಾಜ ಅಧಿಕಾರಿಗಳಿಗೂ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಮಳೆಗಾಲದಲ್ಲಿ‌ ಕಾಮಗಾರಿ ಮಾಡಿ ರಸ್ತೆಗಳನ್ನು ಹಾಳು ಮಾಡಬೇಡಿ, ಒಂದು ಬಾರಿ ಕಾಮಗಾರಿ ಆರಂಭಿಸಿದರೆ ಸಂಪೂರ್ಣವಾಗಿ ಮುಗಿಸಿ ಮಾಡಿ ಬೇರೆ ಕಡೆ ಹೋಗಬೇಕು ಎಂದು ಹೇಳಿದರು.

ಬಡಾವಣೆಗಳ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದು ಆಯಾ ಬಡಾವಣೆಗಳ ಕರ್ತವ್ಯ. ಅಸೋಸಿಯೇಷನ್ ನವರು ಬಡಾವಣೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು‌ ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಎಸ್.ಸಿ.ಮೋರ್ಚಾ ಅಧ್ಯಕ್ಷಸಂಪತ್‌ ಕುಮಾರ್, ಮುಖಂಡರಾದ ಶ್ರೀನಿವಾಸ್‌, ರಾಮಚಂದ್ರ ಡಿ.ವಿ.ಎನ್.ಮಂಜುನಾಥ,ಕೇಶವ,ಕೃಷ್ಣ ಗೋಪಾಲ್, ಚಂದ್ರು, ಮುನಿರಾಜು, ಶಾಂತರಾಜು, ಮುನಿಸ್ವಾಮಿ, ರವಿ ಇದ್ದರು.