ಮೈತ್ರಿ ಹೆಸರಲ್ಲಿ ಶಾಸಕ ಧೀರಜ್ ಮುನಿರಾಜು ಏಕಪಕ್ಷೀಯ ಧೋರಣೆ ಸರಿಯಿಲ್ಲ: ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜ್ ಅವರು ಮೈತ್ರಿ ಧರ್ಮ ಪಾಲನೆ ಮಾಡದೇ ಮೈತ್ರಿ ಅಭ್ಯರ್ಥಿಗಳು ಯಾರು ಎಂದು ಸ್ಪಷ್ಟವಾಗಿ ಮತದಾರರಿಗೆ ತಿಳಿಸದೇ ರೈತರಲ್ಲಿ ಮತ್ತು ಮತದಾರರಲ್ಲಿ ಗೊಂದಲದ ವಾತಾವರಣೆ ಸೃಷ್ಟಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರು ಆನಂದ್ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾಗ ತಾಲ್ಲೂಕಿನ ಗುಂಡಮಗೆರೆ ಹೊಸಹಳ್ಳಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿಸ ಅವರು, ಜೆಡಿಎಸ್ ವರಿಷ್ಟರಾದ ಹೆಚ್.ಡಿ ದೇವೇಗೌಡ ಅವರು ಟಿಎಪಿಎಂಸಿ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿ ಎಂದು ಆದೇಶ ಮಾಡಿದ್ದಾರೆ. ಅದರಂತೆ ಸ್ಥಳೀಯವಾಗಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮುಂದುವರೆಯಬೇಕು. ಆದರೆ ಸ್ಥಳೀಯ ಶಾಸಕ ಧೀರಜ್ ಮುನಿರಾಜ್ ಅವರು ಅಸಂಬದ್ಧವಾಗಿ ಮೈತ್ರಿ ಮಾಡಿಕೊಂಡು ಜೆಡಿಎಸ್ ಮತದಾರರನ್ನು ದಿಕ್ಕುತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ.
ಸಾಮಾಜಿಕ ನ್ಯಾಯ ಸಿಗಬೇಕಾದರೇ ಮೈತ್ರಿ ಪಾಲನೇ ಮತ್ತು ಅಭ್ಯರ್ಥಿಗಳ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ನ ತಾಲ್ಲೂಕು ಅಧ್ಯಕ್ಷರುಗಳು ಸಭೆ ನಡೆಸಿ ಪತ್ರಿಕಾಗೋಷ್ಟಿ ಮುಖಾಂತರ ಸ್ಪಷ್ಟನೆ ನೀಡಬೇಕು ಆಗ ಮತದಾರರಲ್ಲಿರುವ ಗೊಂದಲಗಳಿಗೆ ತೆರೆ ಬೀಳುತ್ತಿದ್ದವು. ಆದರೇ ಅದನ್ನು ಶಾಸಕರು ಮಾಡುತ್ತಿಲ್ಲ. ಎಲ್ಲಾ ಕಡೆ ಪ್ರಚಾರಕ್ಕೆ ತೆರಳಿದಾಗಲೂ ಜೆಡಿಎಸ್ನ್ನು ಬಿಟ್ಟು ಬಿಜೆಪಿ ಮುಖಂಡರು ಮಾತ್ರ ಪ್ರತ್ಯೇಕವಾಗಿ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಹಾಗದರೇ ನಮಗೆ ಮೈತ್ರಿ ಬೇಡ ನಾವು ಏಕಾಂಗಿಯಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಬೇಕಾಗಿತ್ತು.
ನಮ್ಮ ಮನೆಯಲ್ಲಿಯೂ ಮೂವರು ಮತದಾರರಿದ್ದಾರೆ. ಇದೂವರೆಗೂ ನಮ್ಮನಗೆ ಬಿಜೆಪಿಯವರು ವೋಟ್ ಕೇಳೋದಕ್ಕೆ ಬಂದಿಲ್ಲ. ಕೇವಲ ಜೆಡಿಎಸ್ ನವರು ಬಂದಿದ್ದಾರೆ. ಇದನ್ನ ಎನ್ ಡಿಎ ಮೈತ್ರಿ ಅಂತಾರಾ ಎಂದು ಪ್ರಶ್ನಿಸಿದರು. ಸದ್ಯದ ಎನ್ಡಿಎ ಮೈತ್ರಿಯಲ್ಲಿ ಸಾಮಾಜಿಕ ನ್ಯಾಯವಿಲ್ಲ ಇದಕ್ಕೆ ನನ್ನ ಸಹಮತವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group https://chat.whatsapp.com/Fj6L4Eak7N994zl2QHSpHK