ಬೆಂಗಳೂರಿನಿಂದ ಕನ್ಯಾಕುಮಾರಿಗೆ 702 ಕಿ.ಮೀ 'ಸೈಕಲ್ ಯಾತ್ರೆ' ಮಾಡಿದ ಶಾಸಕ ಸುರೇಶ್ ಕುಮಾರ್
ಸ್ಥಳೀಯ ಸುದ್ದಿ


ಬೆಂಗಳೂರು: ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರು ಸುಮಾರು 37 ಗಂಟೆಗಳಲ್ಲಿ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಮಾಡಿದ್ದಾರೆ. ಬೆಂಗಳೂರಿನ ಸೈಕ್ಲಿಸ್ಟ್‌ಗಳ ಗುಂಪಿನೊಂದಿಗೆ 702 ಕಿಮೀ ದೂರದ ಕನ್ಯಾಕುಮಾರಿಗೆ ಯಶಸ್ವಿಯಾಗಿ ಸೈಕಲ್ ನಲ್ಲಿ ದೇಶದ ದಕ್ಷಿಣ ತುದಿಯನ್ನು ತಲುಪಿದ್ದಾರೆ.
1974 ರಲ್ಲಿ ಮೊದಲ ಬಾರಿಗೆ ಅವರು ಮೊದಲ ಬಾರಿಗೆ ಸೈಕಲ್ ಯಾತ್ರೆ ಆರಂಭಿಸಿದರು. ಇದಾದ 50ನೇ ವರ್ಷದ ಬಳಿಕ ಇದೀಗ ಮತ್ತೆ ಯಶಸ್ವಿಯಾಗಿ ಸೈಕಲ್ ಯಾತ್ರೆ ಮುಗಿಸಿದ್ದಾರೆ.
ಕನ್ಯಾಕುಮಾರಿ ತಲುಪಿದ ಹಿನ್ನಲೆಯಲ್ಲಿ ತಮ್ಮ ಅನುಭವವನ್ನು ಶಾಸಕ ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಬಸವೇಶ್ವರ ನಗರದಿಂದ ಪ್ರಯಾಣ ಆರಂಭಿಸಿದ ರಾಜಾಜಿನಗರ ಪೆಡಲ್ ಪವರ್ ತಂಡದಲ್ಲಿ 12 ಸೈಕ್ಲಿಸ್ಟ್‌ಗಳು ಮತ್ತು ಬೆಂಬಲಿಗರ ಜೊತೆಗೂಡಿ ಬಂದಿದ್ದೆವೆ.
51 ವರ್ಷಗಳ ಹಿಂದೆ ವೆಂಕಟೇಶ್ ಮತ್ತು ಸೋಮನಾಥ್ ಎಂಬ ಇಬ್ಬರು ಗೆಳೆಯರೊಂದಿಗೆ ಸೈಕಲ್ ಯಾತ್ರೆ ಮಾಡಿದ್ದೆ. ಅದರ 50ನೇ ವರ್ಷಾಚರಣೆಯ ನೆನಪಿಗಾಗಿ ಮತ್ತೆ ಸ್ನೇಹಿತರೊಂದಿಗೆ ಕನ್ಯಾಕುಮಾರಿಗೆ ಸೈಕಲ್ ನಲ್ಲಿಯೇ ಪ್ರಯಾಣ ಮಾಡಲು ಯೋಜಿಸಿದ್ದೇವು. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಅದು ಈಗ ಸಾಧ್ಯವಾಗಿದ್ದು, ನನ್ನ ಜೀವನದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಆಗಿದ್ದು, ನಮ್ಮ ಸಾಕ್ಷಿ ಎಂದು ಬಣ್ಣಿಸಿದ್ದಾರೆ.
ಇಂದು ಮುಂಜಾನೆ ಕನ್ಯಾಕುಮಾರಿಯಲ್ಲಿ ಸೂರ್ಯೋದಯದ ಕೆಲ ವಿಹಂಗಮ ಕ್ಷಣಗಳ ಅನುಭವವನ್ನು ಕಣ್ಣು ತುಂಬಿಕೊಂಡಿದ್ದಾರೆ.
ನಂತರ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದ ಆವರಣದಲ್ಲಿ ತಮ್ಮ ಜೊತೆಗಾರ ಜೊತೆಗೆ ಕುಳಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ 129 ನೇ ಹಾಗೂ 2025ರ ಕೊನೆಯ "ಮನ್ ಕೀ ಬಾತ್ ಕಾರ್ಯಕ್ರಮದ ನೋಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.