ಮಹದೇವಪುರ: 224 ಸ್ಥಳಗಳಲ್ಲಿ 224 ಸೇವಾ ಕಾರ್ಯಗಳೊಂದಿಗೆ ಮೋದಿ ಹುಟ್ಟುಹಬ್ಬ ಆಚರಣೆ: 12,000 ಕಾರ್ಯಕರ್ತರಿಂದ ಸ್ವಚ್ಛೋತ್ಸವ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

9/18/20251 min read

ಮಹದೇವಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳ ಲಿಂಬಾವಳಿ ನೇತೃತ್ವದಲ್ಲಿ 224 ಸ್ಥಳಗಳಲ್ಲಿ ಸೇವಾ ಕಾರ್ಯ ನಡೆಯಿತು.

ಪ್ರಧಾನ ಮಂತ್ರಿಗಳ ಆಶಯದಂತೆ ಸ್ವಚ್ಛತಾ ಕಾರ್ಯಕ್ರಮವನ್ನು ಸಾರ್ವಜನಿಕ ಸ್ಥಳ, ಶಾಲೆಗಳು, ಕೆರೆ ಅಚ್ಚುಕಟ್ಟು, ದೇವಸ್ಥಾನಗಳ ಆವರಣ, ಸರಕಾರಿ ಆಸ್ಪತ್ರೆ, ಅಶ್ವಥಕಟ್ಟೆ, ಬಸ್ ತಂಗುದಾಣ ಮತ್ತು ಗೋ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಯಿತು. ಗೋಶಾಲೆಗಳಲ್ಲಿ ಗೋವುಗಳಿಗೆ ಮೇವು ವಿತರಣೆ, ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್, ಪೆನ್ ವಿತರಣೆ, ಆಶ್ರಮ ಗಳಲ್ಲಿ ಅನ್ನದಾನ ಮತ್ತು ದಿನಸಿ ಕಿಟ್ ವಿತರಣೆ, ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ, ಶಾಲಾ ಮಕ್ಕಳಿಗೆ ಸಿಹಿ ವಿತರಣೆ, ಸಾರ್ವಜನಿಕರಿಗೆ ದಿನಸಿ ಕಿಟ್ ವಿತರಣೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಇನ್ನಿತರ ಜನಪರ ಕಾರ್ಯಕ್ರಮಗಳನ್ನು ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಯಿತು.

ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾ ಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಮಹದೇವಪುರ ಕ್ಷೇತ್ರದಲ್ಲಿ 224 ಭವ್ಯ ಸೇವಾ ಕಾರ್ಯಕ್ರಮಗಳುನ್ನು ಏರ್ಪಡಿ ಸಲಾಗಿತ್ತು. ಪ್ರತಿವರ್ಷ ಪ್ರಧಾನಿ ಹುಟ್ಟುಹಬ್ಬದ ಅಂಗ ವಾಗಿ ಅವರ ವಯಸ್ಸಿನ ಸಂಖ್ಯೆಗೆ ಅನುಗುಣವಾಗಿ ಅಷ್ಟೇ ಸಂಖ್ಯೆಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಈ ಬಾರಿ 75ನೇ ವರ್ಷದ ಅಮೃತಮಹೋತ್ಸವದ ಪ್ರಯುಕ್ತ ದೇಶಾದ್ಯಂತ ಅಕ್ಟೋಬರ್ 2 ರವರೆಗೆ ಸೇವಾ ಪಾಕ್ಷಿಕ ಆಚರಣೆ ಆರಂಭವಾಗಿದ್ದು, ಅದರಲ್ಲಿ ಭಾಗವಾಗಿ ಮಹದೇವಪುರ ಕ್ಷೇತ್ರದಲ್ಲಿ 224 ಸ್ಥಳಗಳಲ್ಲಿ 224 ಸೇವಾ ಕಾರ್ಯಗಳನ್ನು 12,000 ಕ್ಕೂ ಹೆಚ್ಚು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲದ ಅಧ್ಯಕ್ಷ ಶ್ರೀಧ‌ರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಎಸ್.ಪಿಳ್ಳಪ್ಪ,, ಹಿರಿಯ ರಾಜ್ಯ ಪರಿಷತ್ ಸದಸ್ಯಎಲ್.ರಾಜೇಶ್, ಮುಖಂಡರಾದ ಅನಂತರಾಮಯ್ಯ,, ವರ್ತೂರು ಶ್ರೀಧರ್, ಲೋಕೇಶ್, ಜಯರಾಮ್, ಯುವ ಮೊರ್ಚಾ ಅಧ್ಯಕ್ಷ ನವೀನ್ ಚೌದ್ರಿ, ತೇಜಸ್, ಹಲವಾರು ಮುಖಂಡರು ಸೇವಾದಲ್ಲಿ ಭಾಗಿಯಾಗಿದ್ದರು.