ಜಮ್ಮು-ಕಾಶ್ಮೀರ ಟೂರ್ ರದ್ದುಗೊಳಿಸಿದ 5,000ಕ್ಕೂ ಹೆಚ್ಚು ಕರ್ನಾಟಕದ ಪ್ರವಾಸಿಗರು!

ರಾಜ್ಯ

ರಾಘವೇಂದ್ರ ಹೆಚ್​​.ಎ

4/24/20251 min read

ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಭಯಬೀತಗೊಂಡಿರುವ, ಕರ್ನಾಟಕದ ಅನೇಕ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ತಮ್ಮ ಪ್ರಯಾಣ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಸಂಘ (ಕೆಟಿಎಸ್) ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರವಾಸ ನಿರ್ವಾಹಕರ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದ 5,000 ಕ್ಕೂ ಹೆಚ್ಚು ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ ಜೊತೆಗೆ ಹಣವನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸುತ್ತಿಲ್ಲ.

ಸಂಘಟಿತ ನಿರ್ವಾಹಕರ ಮೂಲಕ ಬುಕ್ ಮಾಡಿದ ಮತ್ತು ರದ್ದುಗೊಳಿಸಿದ ಜನರ ಸಂಖ್ಯೆ ದೊಡ್ಡದಾಗಿದೆ, ಆದರೆ ಅಸಂಘಟಿತ ನಿರ್ವಾಹಕರ ಮೂಲಕ ಹಾಗೆ ಮಾಡಿದವರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಮುಂದಿನ ಬಾರಿ ಟೂರಿಂಗ್ ಸೀಸನ್ ಅಕ್ಟೋಬರ್‌ನಿಂದ ಪ್ರಾರಂಭವಾದಾಗ ಮಾತ್ರ ಪ್ರವಾಸೋದ್ಯಮದ ಭವಿಷ್ಯ ತಿಳಿಯುತ್ತದೆ ಎಂದು ಕೆಟಿಎಸ್ ಕಾರ್ಯದರ್ಶಿ ಎಸ್ ಮಹಾಲಿಂಗಯ್ಯ ಮಾಹಿತಿ ನೀಡಿದ್ದಾರೆ.