ಅಳಿಯನ ಜೊತೆ ಅತ್ತೆ ಪರಾರಿ: ಮೊಬೈಲ್‌ನಲ್ಲಿ ತಾಯಿ-ಗಂಡನ ವಿಡಿಯೋ ನೋಡಿ ಪತ್ನಿ ಶಾಕ್..!
ಜಿಲ್ಲಾ ಸುದ್ದಿ


ದಾವಣಗೆರೆ: ಅಕ್ರಮ ಸಂಬಂದ ಹೊಂದಿದ್ದ 25ರ ವಯಸ್ಸಿನ ಮಗಳ ಗಂಡನ ಜೊತೆ 55 ವಯಸ್ಸಿನ ಅತ್ತೆ ಪರಾರಿಯಾಗಿರುವ ಘಟನೆಯೊಂದು ಕರ್ನಾಟಕದಲ್ಲಿ ನಡೆದಿರೊದು ಅಚ್ಚರಿ ತಂದಿದೆ.
ಮದುವೆಯಾದ ಎರಡೇ ತಿಂಗಳಿಗೆ ಅತ್ತೆ ಜೊತೆ ಪತಿ ಎಸ್ಕೇಪ್ ಆಗಿದ್ದು, ಪತ್ನಿ ಕಣ್ಣೀರಿಟ್ಟಿದ್ದಾಳೆ. ಅಳಿಯನಿಗೆ 25 ವರ್ಷ ಎನ್ನಲಾಗಿದ್ದು, ಅತ್ತೆ ಆತನಿಗಿಂತ 30 ವರ್ಷ ಹಿರಿಯವರಾಗಿದ್ದು, 55 ವರ್ಷ ಆಗಿದೆ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಅಳಿಯ ಗಣೇಶ್ (24ವರ್ಷ) ಹಾಗೂ ಅತ್ತೆ ಶಾಂತಾ (48ವರ್ಷ) ಓಡಿಹೋಗಿದ್ದು ಇಬ್ಬರೂ ಕಾಣೆಯಾಗಿರುವ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮೇ 2 ರಂದು ಪ್ರತ್ಯೇಕ ದೂರುಗಳು ದಾಖಲಾಗಿವೆ. ಮೇ 2ರಂದು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಪತ್ನಿಯನ್ನ ಬಿಟ್ಟು ಅತ್ತೆಯ ಜೊತೆ ಆತ ಎಸ್ಕೇಪ್ ಆಗಿದ್ದಾನೆಂದು ಹೇಳಲಾಗಿದೆ. ಶಾಂತಾ ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವರ ಎರಡನೇ ಪತ್ನಿ. 13 ವರ್ಷದ ಹಿಂದೆ ನಾಗರಾಜ್ ಅವರ 2ನೇ ಪತ್ನಿಯಾಗಿ ಶಾಂತಾ ಮನೆಗೆ ಬಂದಿದ್ದಳಂತೆ. ನಾಗರಾಜ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಮಗ ಇದ್ದಾನೆ. ನಾಗರಾಜ್ ಜೊತೆ ಹಿರಿಯ ಮಗಳು ಹೇಮಾ ವಾಸವಿದ್ದರು.
ಶಾಂತಾ ಮೂರ್‍ನಾಲ್ಕು ವರ್ಷಗಳ ಹಿಂದೆಯೇ ಮರವಂಜಿಯ ಗಣೇಶ್ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಆಕೆ ತನ್ನ ಮಲಮಗಳು (ಗಂಡನ ಮೊದಲ ಹೆಂಡತಿಯ ಮಗಳು) ಹೇಮಾವತಿಯನ್ನು 25 ದಿನಗಳ ಹಿಂದಷ್ಟೇ ತಾನೇ ಮುಂದಾಗಿ ನಿಂತು ತಾನು ಸಂಬಂಧ ಇಟ್ಟುಕೊಂಡ ಯುವಕನೊಂದಿಗೆ ಮದುವೆ ಮಾಡಿಸಿದ್ದಳು. ಮದುವೆ ಮಾಡಿಕೊಟ್ಟ 15 ದಿನಕ್ಕೆ ಗಣೇಶ್ ತನ್ನ ಮಲ ಅತ್ತೆ ಶಾಂತಾ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿತ್ತಂತೆ. ಗಣೇಶನ ಮೊಬೈಲ್‌ನಲ್ಲಿ ಮಲತಾಯಿ ಶಾಂತಾ ಕಳಿಸಿದ್ದ ಅಶ್ಲೀಲ ಮೆಸೇಜ್‌ಅನ್ನು ಹೇಮಾ ನೋಡಿದ್ದರಂತೆ.
ತಕ್ಷಣ ಮೆಸೇಜ್‌ಗಳನ್ನು ತನ್ನ ತಂದೆ ನಾಗರಾಜ್‌ಗೆ ಹೇಮಾ ಫಾರ್ವರ್ಡ್ ಮಾಡಿದ್ದಳು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಹಣ, ಆಭರಣ ಕದ್ದು ಶಾಂತಾ ಅಳಿಯ ಗಣೇಶನ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಪತ್ನಿ ಹೇಮಾಳನ್ನ ಬಸ್ ಸ್ಟಾಪ್‌ನಲ್ಲಿಯೇ ಬಿಟ್ಟು ಗಣೇಶ್ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.