ನಗರ ಪಾಲಿಕೆ ವಾರ್ಡ್ ವಿಂಗಡಣೆ ಅವೈಜ್ಞಾನಿಕ: ಬೈರತಿ ಬಸವರಾಜ್
ಸ್ಥಳೀಯ ಸುದ್ದಿ


ಕೆ.ಆರ್. ಪುರ: ಗ್ರೇಟರ್ ರಾಜ್ಯ ಸರಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ, ಅದರಡಿಯಲ್ಲಿ ಐದು ನಗರ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತಂದಿದೆ. ಆದರೆ, ಈ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ವಾರ್ಡ್‌ಗಳ ವಿಂಗಡನೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಎಂದು ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಕಲ್ಕೆರೆ, ದಾಸಪ್ಪ ಬಡಾವಣೆ, ನಾಗೇನಹಳ್ಳಿ, ಜಯಂತಿನಗರ, ರಾಮಮೂರ್ತಿನಗರ ಸೇರಿದಂತೆ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹೊಸ ವಿಂಗಡಣೆಯಿಂದ ಸ್ಥಳೀಯ ಮಹತ್ವ ಕಳೆಗುಂದಿದೆ ಎಂದು ಆರೋಪಿಸಿದರು.
ನಿರ್ದಿಷ್ಟವಾಗಿ ಕಲ್ಕೆರೆ ವಾರ್ಡ್ ಬಗ್ಗೆ ಪ್ರಸ್ತಾಪಿಸಿ, ಕಲ್ಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ದೇವಾಲಯಗಳಾದ ವೇಣುಗೋಪಾಲಸ್ವಾಮಿ, ಈಶ್ವರ ದೇವಾಲಯ, ಶಾರದಾ ದೇವಿ, ವೀರಾಂಜನೇಯ ಹಾಗೂ ವೀರಭದ್ರ ಸ್ವಾಮಿ ದೇವಾಲಯಗಳನ್ನು ನೂತನವಾಗಿ ರಚಿಸಲಾದ ಹೊರಮಾವು ಅಗರ ವಾರ್ಡ್‌ಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಕಲ್ಕೆರೆ ವಾರ್ಡ್‌ನ ಮಹತ್ವ ಕಳೆಗುಂದಿದೆ ಎಂದು ಹೇಳಿದರು.
ಹೊರಮಾವು ವಾರ್ಡನ್ನು ಐದು ವಾರ್ಡ್‌ಗಳಾಗಿ ವಿಂಗಡಣೆ ಮಾಡಲಾಗಿದ್ದು, ವಾರ್ಡ್ನ ಮೂಲ ಹೆಸರಾದ ಹೊರಮಾವು ಗ್ರಾಮದ ಹೆಸರನ್ನು ಕಡೆಗಣಿಸಲಾಗಿದೆ. ಆದ್ದರಿಂದ, ಹೊರಮಾವು ಅಗರ ವಾರ್ಡ್‌ಗೆ ಹಳೆಯ ಹೊರಮಾವು ವಾರ್ಡ್ ಹೆಸರನ್ನು ಮರುನಾಮಕರಣ ಮಾಡಿ, ವಾರ್ಡ್ ವಿಂಗಡಣೆಯಲ್ಲಿರುವ ದೋಷಗಳನ್ನು ಸರಿಪಡಿಸುವ ಮೂಲಕ ಸಾರ್ವಜನಿಕರ ಮನವಿಗೆ ಸ್ಪಂದಿಸುವಂತೆ ಶಾಸಕರು ಆಗ್ರಹಿಸಿದರು.
ಕ್ಷೇತ್ರದಲ್ಲಿ ನನ್ನಷ್ಟು ತಿರುಗಾಟ ಮಾಡುವ ಶಾಸಕರು ಯಾರು ಬೆಂಗಳೂರಿನಲ್ಲಿ ಇಲ್ಲ ಆದರೆ ನನ್ನ ವಿರುದ್ದ ಕಾಂಗ್ರೆಸ್ ಪಕ್ಷದವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ಕೆ.ಆರ್.ಪುರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಅಂತ ಜನರಿಗೆ ಹೇಳಿಕೊಟ್ಟು ಮಾತನಾಡಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅನುದಾನ ನೀಡುತ್ತಿಲ್ಲ ಹೇಗೆ ಅಭಿವೃದ್ಧಿ ಮಾಡುವುದು.ಇವರದೇ ಸರ್ಕಾರ ಇದ್ದು ಅಭಿವೃದ್ಧಿ ಆಗಿಲ್ಲ ಎಂದು ಆರೋಪ ಮಾಡಿದರೆ ಎಷ್ಟು ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಮುನೇಗೌಡ, ಮುಖಂಡರಾದ ದುಶ್ಯಂತ್ ರಾಜ್,ಇಟ್ಟಾಚಿ ಮಂಜು,ಗಣೇಶ ರೆಡ್ಡಿ, ಮುರಳಿ, ಶಿವಕುಮಾರ್, ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.