ನನ್ನ ಲವ್ ನಿಮ್ಮ ಕೈಯಲ್ಲಿದೆ ಪಾಸ್ ಮಾಡಿ: 500 ರೂ ಇಟ್ಟು sslc ವಿದ್ಯಾರ್ಥಿ ಮನವಿ, ಫೋಟೋ ವೈರಲ್​

ರಾಜ್ಯ

ರಾಘವೇಂದ್ರ ಹೆಚ್​​.ಎ

4/20/20251 min read

SSLC ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ವೇಳೆ ವಿದ್ಯಾರ್ಥಿಯೊಬ್ಬ ನನ್ನ ಲವರ್ SSLC ಪಾಸ್ ಆದ್ರೆ ಮಾತ್ರ ಲವ್ ಮಾಡ್ತೀನಿ ಅಂತ ಹೇಳಿದ್ದಾಳೆ. ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ. ಪ್ಲೀಸ್ ಪಾಸ್ ಮಾಡಿ ಅಂತ 500 ರೂಪಾಯಿ ನೋಟು ಇರಿಸಿರೋ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಮೌಲ್ಯಮಾಪನ ಕೇಂದ್ರದಲ್ಲಿ ವರದಿಯಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯ ಮಾಪನ ಕೇಂದ್ರದಲ್ಲಿ ಇಂತದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. SSLC ಉತ್ತರ ಪರೀಕ್ಷೆಯ ಮೌಲ್ಯ ಮಾಪನದ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬನ ವಿಚಿತ್ರ ಪತ್ರ ಪತ್ತೆಯಾಗಿದೆ.

ಹೀಗಿದೆ ಪತ್ರದಲ್ಲಿನ ವಿದ್ಯಾರ್ಥಿ ಬೇಡಿಕೆ

ಸರ್ ರೀ, ಮೇಡಂ ರೀ, ನಿಮ್ಮ ಕಾಲ ಬೀಳತ್ತೀನೆ. ನನ್ನ ಲವ್ ನಿಮ್ಮ ಕೈಯಾಗ ಅಯಿತಿ ರೀ. ನಾ ಪೇಪರ್ ದಾಗ ಪಾಸ್ ಆದರ ಅಷ್ಟೇ ಲವ್ ಮಾಡತ್ತನೆ ಅಂದಾಳ ರೀ ನನ್ನ ಹುಡುಗಿ. ಈ 500 ನಿವ ಚಾ ಕುಡಿರಿ ಸರ್ ರೀ. ನನ್ನ ಪಾಸ್ ಮಾಡರಿ ಅಂತ ಕೋರಿಕೊಂಡಿದ್ದಾನೆ.

ಉತ್ತರ ಪತ್ರಿಕೆಯಲ್ಲಿ ಪತ್ರದ ಜೊತೆ 500 ರೂಪಾಯಿ ಇಟ್ಟ ವಿದ್ಯಾರ್ಥಿ

ಇನ್ನೂ ನನ್ನ ಪ್ರೀತಿ ನಿಮ್ಮ ಕೈಯಲ್ಲಿ ಇದೆ. ನನ್ನ ಹುಡುಗಿ ನಾನು SSLC ಪಾಸ್ ಆದರೆ ಮಾತ್ರ ಪ್ರೀತಿ ಮಾಡ್ತೀನಿ ಅಂತ ಹೇಳಿದ್ದಾಳೆ. ಹೀಗಾಗಿ ಪಾಸ್ ಮಾಡಿ ಅಂತ ಕೋರಿಕೊಂಡಿರುವಂತ ವಿದ್ಯಾರ್ಥಿ, ಅದರೊಟ್ಟಿಗೆ ರೂ.500 ನೋಟು ಇರಿಸಿದ್ದಾನೆ. ಆ ದುಡ್ಡಲ್ಲಿ ಟೀ ಕುಡಿಯಿರಿ ಅಂತ ಹೇಳಿದ್ದಾನೆ.

ಒಟ್ಟಾರೆಯಾಗಿ SSLC ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರ ಬರೆಯೋದು ಬಿಟ್ಟು, ತನ್ನ ಲವ್ ಮ್ಯಾಟರ್ ಹೇಳಿಕೊಂಡಿದ್ದಾನೆ. ಜೊತೆಗೆ ಪಾಸ್ ಮಾಡಿ ಪ್ಲೀಸ್ ಅಂತ ಮೌಲ್ಯ ಮಾಪಕರನ್ನು ಬೇಡಿಕೊಂಡಿರುವಂತ ವಿಚಿತ್ರ ಪತ್ರ ಚಿಕ್ಕೋಡಿ ಮೌಲ್ಯಮಾಪನ ಕೇಂದ್ರದಲ್ಲಿ ಪತ್ತೆಯಾಗಿದೆ.