ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕೇಂದ್ರದ ದ್ವೇಷ ರಾಜಕಾರಣ:ಡಿ.ಕೆ‌.ಮೋಹನ್ ಬಾಬು

ಸ್ಥಳೀಯ ಸುದ್ದಿರಾಜಕೀಯ

ಧರ್ಮ ಬಸವನಪುರ.

12/20/20251 min read

ಕೆ.ಆರ್.ಪುರ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆ ಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಪ್ರತಿಷ್ಠೆಗೆ ಧಕ್ಕೆ ತರುವ ಕಾರ್ಯವನ್ನು ಬಿ.ಜೆ.ಪಿ ಪಕ್ಷಮಾಡುತ್ತಿದೆ ಎಂದು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ‌.ಮೋಹನ್ ಬಾಬು ಅವರು ಕಿಡಿಕಾರಿದರು.

ಕ್ಷೇತ್ರದ ದೇವಸಂದ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ನಾರಾಯಣಸ್ವಾಮಿ ಹಾಗೂ ಸಂಘಡಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ ಅವರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಅಕ್ರಮ ನಡೆದಿಲ್ಲದಿದ್ದರೂ ಭ್ರಷ್ಟಾಚಾರ, ಹಣ ಕಾಸು ಅಕ್ರಮ ವರ್ಗಾವಣೆ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಪದೇ ಪದೇ ವಿಚಾರಣೆಗೆ ಹಾಜರಾಗುವಂತೆ ಮಾಡಿದ್ದರು. ಬಿಜೆಪಿ ತನ್ನ ದ್ವೇಷ ರಾಜಕಾರಣವನ್ನು ಕೈಬಿಟ್ಟು ದೇಶವನ್ನು ಕಾಡುತ್ತಿರುವ ನಿರುದ್ಯೋಗದ ಸಮಸ್ಯೆ ಸೇರಿ ಇನ್ನಿತರೆ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಹೆಸರಾಂತ ಸರ್ಕಾರಿ ಕಾರ್ಖಾನೆಗಳಲ್ಲಿ ಒಂದಾದ ಐಟಿಐ ಕಾರ್ಖಾನೆ.ಈ ನಮ್ಮ ಕೆ.ಆರ್.ಪುರ ಭಾಗದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.ಈ ಐಟಿಐ ಕಾರ್ಖಾನೆಯನ್ನಬಿಜೆಪಿ ಪಕ್ಷದರು ದಿವಾಳಿತನ ಮಾಡಿ ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದೆ. ಹತ್ತು ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಕಾಂಗ್ರೆಸ್ ಸರ್ಕಾರ 4500 ಕೋಟಿ ಅನ್ನು ಕೊಟ್ಟು ಅಭಿವೃದ್ಧಿ ಮಾಡಿತ್ತು.ಆದರೆ ಬಿಜಿಪಿ ಅಧಿಕಾರಕ್ಕೆ ಬಂದ ನಂತರ ಕಂಪನಿಯ ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನ ನೀಡದೇ ಸಾಲದ ಸುಳಿಗೆ ಸಿಲುಕಿಸಿ ಈ 3700 ಕೋಟಿ ರೂಪಾಯಿಗಳ ಸಾಲ ಇದೆ ಎಂದು ಮಾರಟ ಮಾಡಲು ಮುಂದಾಗುತ್ತಿರುವುದು ಖಂಡನೀಯ ಆದರಿಂದ ಕಾರ್ಖಾನೆ ಉಳಿಸುವ ಸಲುವಾಗಿ ಕಾರ್ಮಿಕರ ಜೊತೆ ಮಾತನಾಡಿ ಬೃಹತ್ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾರಾಯಣಸ್ವಾಮಿ, ಶಂಕರ್ ನಾರಾಯಣ್,ಸೂರಿ,ಕುಮಾರಿ ಸಂಘಡಿಗರು,ಪ್ರತಾಪ್,ಲಕ್ಷ್ಮಯ್ಯ,ಶೇಖರ್,ಪ್ರೇಮಾ, ಜನಕಮ್ಮ,ಪಿಂಕಿ,ಯರಯ್ಯಪಾಳ್ಯ ಗ್ರಾಮದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರಾದ ಸಿ.ವೆಂಕಟೇಶ್, ಅರಳಪ್ಪ,ಗ್ಯಾರಂಟಿ ಅಧ್ಯಕ್ಷ ಜಯರಾಮ್,ಮುಖಂಡರಾದ ಅಗರ ಪ್ರಕಾಶ್,ಸುರೇಶ್,ಓಂಶಕ್ತಿಸೋಮಶೇಖರ್,ಡಿ.ಕೆ.ದೇವೆಂದ್ರ,ರಮೇಶ್,ಜಯಂತಿನಗರಮುನಿರಾಜು,ರಾಜಹಂಸ,ಪ್ರಸನ್ನ, ಪುರುಷೋತ್ತಮ್,ಪ್ರಚಾರಸಮಿತಿಯಬ್ಲಾಕ್ಕಾಂಗ್ರೆಸ್ಅಧ್ಯಕ್ಷರಾದಶ್ರೀನಿವಾಸ್[ಸುಬ್ಬು],ಸಾಕಮ್ಮ,ಕಲಾಪ್ರಕಾಶ್,ಗೀತಮ್ಮ,ಶಂಕರ್ ಹಾಜರಿದ್ದರು