ಕೋಲಾರ: ಕೆಎಸ್ ಆರ್ ಟಿಸಿ ಗೆ ಓಮ್ನಿ ಕಾರು ಡಿಕ್ಕಿ : ಕಾರು ಚಾಲಕ ಸಾವು

ಜಿಲ್ಲಾ ಸುದ್ದಿ

ಧರ್ಮ ಬಸವನಪುರ

5/22/20251 min read

ಕೋಲಾರ : ಕೆಎಸ್ ಆರ್ ಟಿಸಿ ಬಸ್ ಗೆ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ನಗರದ ಗಾಂಧಿ‌ನಗರದ ಬಳಿ ನಡೆದಿದೆ..

ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಗ್ರಾಮದ ಚೇತನ (21) ಮೃತ ಯುವಕ. ವೃತ್ತಿಯಲ್ಲಿ ಪೋಟೊ ಗ್ರಾಫರ್ ಆಗುರುವ ಯುವಕ ಹೆಚ್ ಕ್ರಾಸ್ ನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುವ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಕೋಲಾರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.