ಪ್ರಾಣಿಗಳ ತ್ಯಾಜ್ಯ ಸಂಸ್ಕರಣ ಘಟಕ ಉದ್ಘಾಟನೆಗೆ ವಿರೋಧ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

8/28/20251 min read

ಮಹದೇವಪುರ: ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಡೆ ಹೊಸೂರು ಬಳಿ ಬಾನಾ ಇಕೋ ವರ್ಕ್ಸ್ ಸಂಸ್ಥೆ ವತಿಯಿಂದ ನೂತನವಾಗಿ ಪ್ರಾರಂಭಗೊಂಡಿರುವ ಪ್ರಾಣಿಗಳ ತ್ಯಾಜ್ಯ ಸಂಸ್ಕರಣೆ ಘಟಕವನ್ನು ಅನ್ನು ಉದ್ಘಾಟಿಸಲಾಗಿದ್ದು. ಇದಕ್ಕೆ ಸ್ಥಳೀಯರು ಮತ್ತು ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು .

ಇದೇ ವೇಳೆ ಉದ್ಘಾಟನೆ ಆಗಮಿಸಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆಯಿತು.ಪೋಲೀಸರು ಮಧ್ಯೆ ಪ್ರವೇಶಿಸಿ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ ನಡುವೆಯೇ ಘಟಕ ಉದ್ಘಾಟಿಸಲಾಯಿತು.

ಕಣ್ಣೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಮಾಂಸ ತ್ಯಾಜ್ಯ ಸಂಸ್ಕರಣಾ ಘಟಕ ಪ್ರದೇಶ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ.ಈ ಘಟಕ ಚಾಲನೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಬೀರುವ ಸಾದ್ಯತೆ ಇದ್ದು, ಈಗಾಗಲೇ ಕಸದಿಂದ ಈ ಸುತ್ತಮುತ್ತಲಿನ ನಿವಾಸಿಗಳು ಸಾಕಷ್ಟು ರೋಗಗಳಿಂದ ಬಳಲುತ್ತಿದ್ದು ಊರನ್ನೆ ತೊರೆಯುತ್ತಿದ್ದಾರೆ. ಅದರಲ್ಲಿ ಈಗ ಪ್ರಾಣಿಗಳ ತ್ಯಾಜ್ಯ ಸಂಸ್ಕರಣಾ ಘಟಕವನ್ನ ಆರಂಭಿ ಬಡ ಜನರ ಜೀವನದಲ್ಲಿ ಚೆಲ್ಲಾಟ ಆಡುತ್ತಿದ್ದಾರೆ.ಈ ಕೂಡಲೇ ಘಟಕವನ್ನ ಸ್ಥಗಿತಗೊಳಿಸಿ ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಭೂ ನ್ಯಾಯ ಮಂಡಳಿ ಸದಸ್ಯ ವರುಣ್ ತಿಳಿಸಿದರು.

ಹೊಸೂರು ಬಂಡೆ ಗ್ರಾಮಕ್ಕೆ ಬಂದರೆ ಸಾಕು ದುರ್ವಾಸನೆ ಬಡಿಯುತ್ತದೆ.ನೂರಾರು ಕಸದ ವಾಹನಗಳು ಸಂಚಾರ ಮಾಡುವುದರಿಂದ ಧೂಳು ಹೆಚ್ಚಾಗಿ ಕಂಡುಬರುತ್ತದೆ. ಇಲ್ಲಿನ ನಿವಾಸಿಗಳು ಕಡು ಬಡತನದಲ್ಲಿ ಬದುಕುತ್ತಿದ್ದಾರೆ. ಕೂಲಿನಾಲಿ ಮಾಡಿ ದುಡಿದ ಹಣವನ್ನು ಆಸ್ಪತ್ರೆಗೆ ಇಡುತ್ತಿದ್ದಾರೆ ಎಂದರು.

ಸ್ಥಳೀಯ ಜನರನ್ನ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಅವರ ಕಷ್ಟ,ನೋವುಗಳನ್ನ ಅರಿಯದೇ ತ್ಯಾಜ್ಯ ಘಟಕಕ್ಕೆ ಅನುಮತಿ ನೀಡಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕಣ್ಣೂರಿನ ಪಂಚಾಯಿತಿ ಸದಸ್ಯ ಮಧು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾರಾಯಣಸ್ವಾಮಿ,ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಅಧ್ಯಕ್ಷರು ಪ್ರಶಾಂತ್,ಸ್ಥಳಿಯ ಮುಖಂಡರಾದ ನಂಜೇಗೌಡರು,ಸಮಹುಲ್ಲಾ,ಹಿರಂಡಹಳ್ಳಿ ಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.