ವರ್ತೂರು ಪೊಲೀಸ್ ಠಾಣೆ ಸ್ಥಾಳಾಂತರಕ್ಕೆ ವಿರೋಧ. ಸ್ಥಳೀಯರಿಂದ ಸಹಿ ಸಂಗ್ರಹ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/23/20251 min read

ಮಹದೇವಪುರ: ವರ್ತೂರು ಪೋಲಿಸ್ ಠಾಣೆಯನ್ನು‌ ಗುಂಜೂರಿಗೆ ಸ್ಥಳಾಂತರ ಮಾಡುತ್ತಿರುವುದು ವಿರೋಧಿಸಿ ವರ್ತೂರಿ ನಾಗರೀಕರ ಹಿತರಕ್ಷಣಾ ವೇದಿಕೆ ಹಾಗೂ ಕಾಂಗ್ರೆಸ್ ನಾಯಕ‌ ಕುಪ್ಪಿ ಮಂಜುನಾಥ್ ಅವರು ಸಾರ್ವಜನಿಕರ‌ ಬಳಿ ಸಹಿ‌ ಸಂಗ್ರಹ ಅಭಿಯಾನ ಮಾಡಿ ನಂತರ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿದ ಕುಪ್ಪಿ ಮಂಜುನಾಥ್ ಅವರು ವರ್ತೂರು ಹೋಬಳಿ ಕೇಂದ್ರವಾಗಿದಲ್ಲಿರುವ ಪೋಲಿಸ್ ಠಾಣೆಯನ್ನು ಸ್ಥಳೀಯರ ಅಭಿಪ್ರಾಯ ಪಡೆಯದೆ ಏಕಪಕ್ಷೀಯ ಗೂಂಜೂರಿಗೆ ಸ್ಥಳಾಂತರ ಮಾಡುತ್ತಿರುವುದು ವರ್ತೂರು ಜನತೆಗೆ ಮಾಡುತ್ತಿರುವ ಅನ್ಯಾಯ ಎಂದರು‌

ವರ್ತೂರು ಗ್ರಾಮದ ಸರ್ವೆ ನಂ 52 ರಲ್ಲಿ 28 ಗುಂಟೆ ಜಮೀನು ಲಭ್ಯವಿದ್ದು ಇದು ಇಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣ ಮಾಡಬಹುದು. ವರ್ತೂರಿಗೆ ಗ್ರಮಕ್ಕೆ ಚ್ಯುತಿ ತರಲು ಪೋಲಿಸ್ ಠಾಣೆಯನ್ನು ಬೇರೆ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ದೂರಿದರು.

ಹೋಬಳಿ ಕೇಂದ್ರದಲ್ಲಿ ಇರುವ ಠಾಣೆಯನ್ನು ಬೇರೆ ಭಾಗಕ್ಕೆ ಸ್ಥಳಾಂತರ ಮಾಡುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.ವರ್ತೂರು ಪ್ರದೇಶ ಒಂದು ಪ್ರಮುಖ ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ವ್ಯಾಪಾರ ಮತ್ತು ಸಂಪರ್ಕದ ಕೊಂಡಿಯಾಗಿದೆ ಆರಕ್ಷಕ ಠಾಣೆ ಇಲ್ಲಿಯೇ ಇರುವುದು ತುಂಬಾ ಅತ್ಯಾವಶ್ಯಕವಾಗಿದೆ ಎಂದು ತಿಳಿಸಿದರು.

ಈಗಾಗಲೇ ವರ್ತೂರಿನಲ್ಲಿ ಸರ್ಕಾರಿ ಕಚೇರಿಗಳೆಲ್ಲ ಬಾಡಿಗೆಯಲ್ಲಿ ಇದ್ದು ಸರ್ಕಾರಿ ಭೂಮಿಗಳನ್ನೆಲ್ಲ ಯಾರೋ ಬಲಾಢ್ಯರು ಬಳಸಿಕೊಳ್ಳುತ್ತಿದ್ದಾರೆ ಈ ಬಗ್ಗೆ ಗಮನ ಹರಿಸಬೇಕಾದ ಇಲಾಖೆ ಹಾಗು ಸ್ಥಳೀಯ ಶಾಸಕರು ಏನು ತಿಳಿಯದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಈ ವಿಚಾರವಾಗಿ ಸ್ಥಳೀಯರಿಂದ ಪೊಲೀಸ್ ಠಾಣೆ ಬೇರೆಡೆ ಸ್ಥಳಾಂತರವಾಗಬಾರದು ಎಂದು ಸಹಿ ಸಂಗ್ರಹ ಅಭಿಯಾನವನ್ನು ಕೈಗೊಂಡು ಡಿಸಿ , ಜಿಬಿಎ ಕಮಿಷನರ್ ಗೆ ಮನವಿ ನೀಡುವುದಾಗಿ ತಿಳಿಸಿದರು.

ಸದನದಲ್ಲಿ ವರ್ತೂರು ಠಾಣೆ ಸ್ಥಳಾಂತರ ಪ್ರಸ್ತಾಪ

ವಿಚಾರ ಇತ್ತೀಚೆಗೆ ಸದನದಲ್ಲಿ ಪ್ರಸ್ತಾಪವಾಗಿತ್ತು. ವರ್ತೂರು ಠಾಣೆಗೆ ಗುಂಜೂರಿನಲ್ಲಿ ಜಾಗ ಮಂಜೂರು ಮಾಡುವಂತೆ ಶಾಸಕಿ ಮಂಜುಳಾ ಲಿಂಬಾವಳಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕಂದಾಯ ಇಲಾಖೆಯಿಂದ ಜಾಗ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ಈ ಸಂದರ್ಭದಲ್ಲಿ ಜಗದೀಶ್, ಇಕ್ಬಾಲ್ ಅಹ್ಮದ್, ಪಿ‌.ಕೃಷ್ಣಪ್ಲ, ಸುಬ್ಬಣ್ಣ, ಶ್ರೀಧರ್ ಟಿ‌. ಪೋಲಿಸ್ ನಾಗರಾಜ್ ಇದ್ದರು.