ಅನ್ಯಧರ್ಮದ ಹುಡುಗನ ಜೊತೆ ಓಡಿ ಹೋದ ಮಗಳು, ಬದುಕಿದ್ದಾಗಲೇ ಪಿಂಡ ಇಟ್ಟ ಪೋಷಕರು.
ದೇಶ/ವಿದೇಶಸೋಷಿಯಲ್ ಮೀಡಿಯಾ


ನಾಡಿಯಾ (ಪಶ್ಚಿಮ ಬಂಗಾಳ): ಯುವತಿಯೊಬ್ಬಳು ಓಡಿಹೋಗಿ ಅನ್ಯ ಧರ್ಮದ ಯುವಕನನ್ನು ಮದುವೆಯಾಗಿದ್ದು, ಈ ನೋವನ್ನ
ಸಹಿಸಲಾಗದ ಕುಟುಂಬವೊಂದು ಆಕೆ ಬದುಕಿರುವಾಗಲೇ ಶ್ರಾದ್ಧ ಮಾಡಿದ ಘಟನೆ ನಾಡಿಯಾದ ಕೃಷ್ಣಗಂಜ್‌ನ ಶಿಬ್ನಿಬಾಸ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಶ್ರಾದ್ಧ ಕಾರ್ಯಕ್ರಮ ನಡೆದಿದೆ.
ಎರಡನೇ ವರ್ಷದ ಪಿಯುಸಿ ಓದುತ್ತಿದ್ದ ಯುವತಿ, ಇತ್ತೀಚೆಗೆ ನಾಡಿಯಾದ ಹನ್ಸ್‌ಖಾಲಿ ಘಜ್ನಾ ಪ್ರದೇಶದ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ಇದನ್ನು ಸಹಿಸಲಾಗದ ಕುಟುಂಬ, ಆಕೆ ಮದುವೆಯಾದ 12 ದಿನಗಳ ನಂತರ ತಮ್ಮ ಮಗಳು ನಮ್ಮ ಪಾಲಿಗೆ ಸತ್ತುಹೋಗಿದ್ದಾಳೆ ಎಂದು ತಿಳಿದು ಶ್ರಾದ್ಧ ಕಾರ್ಯ ಮಾಡಿದೆ.
ಹುಡುಗಿಯ ನಿರ್ಧಾರವನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲದ ಕುಟುಂಬವು ತಮ್ಮ ಮಗಳು ಸತ್ತಿದ್ದಾಳೆಂದು ಘೋಷಿಸಿ, ತಲೆ ಬೋಳಿಸುವುದು, ಅವಳ ವೈಯಕ್ತಿಕ ವಸ್ತುಗಳನ್ನು ಸುಡುವುದು ಮತ್ತು ನೆರೆಹೊರೆಯವರು ಮತ್ತು ಸಂಬಂಧಿಕರು ಭಾಗವಹಿಸಿದ ಶ್ರದ್ಧಾ ಸಮಾರಂಭವನ್ನು ಆಯೋಜಿಸುವುದು ಸೇರಿದಂತೆ ಪೂರ್ಣ ಹಿಂದೂ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಿದ ನಂತರ ಈ ಘಟನೆ ನಡೆಯಿತು.
ಹಿಂದೂ ಸಂಪ್ರದಾಯದ ಪ್ರಕಾರ ಹುಡುಗಿಯ ಭಾವಚಿತ್ರಕ್ಕೆ ಹೂವಿನ ಹಾರವನ್ನ ಹಾಕಿ ಮತ್ತು ಧಾರ್ಮಿಕ ವಿಧಿವಿಧಾನದ ಪುರೋಹಿತರನ್ನ ಕರೆಸಿ ಮೃತರಿಗೆ ಶ್ರಾದ್ಧ ಮಾಡುವಂತೆ ಮಾಡಲಾಯಿತು ಎಂದು ತಿಳಿದು ಬಂದಿದೆ.
ತಲೆ ಬೋಳಿಸುವುದು ಸೇರಿದಂತೆ ಶ್ರಾದ್ಧದ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಲಾಯಿತು. ಪೂಜಾರಿ ಸಮಾರಂಭವನ್ನು ನಡೆಸಿದ ಸ್ಥಳದಲ್ಲಿ ಯುವತಿಯ ಹಾರ ಹಾಕಿದ ಫೋಟೋವನ್ನು ಸಹ ಇರಿಸಲಾಗಿತ್ತು.ನಾವು ಅವಳ ಎಲ್ಲಾ ವೈಯಕ್ತಿಕ ವಸ್ತುಗಳನ್ನು ಸಹ ಸುಟ್ಟುಹಾಕಿದ್ದೇವೆ ಎಂದು ಆಕೆಯ ತಾಯಿ ಹೇಳಿದರು.
ಯುವತಿ ಅನ್ಯ ಜಾತಿಯ ವ್ಯಕ್ತಿಯೊಂದಿಗೆ ಓಡಿಹೋಗಿ ಮದುವೆಯಾದ 12 ದಿನಗಳ ನಂತರ ನಮ್ಮ ಕುಟುಂಬಸ್ಥರು ಶ್ರಾದ್ಧ ನಡೆಸಿದ್ದೇವೆ.ಅವಳು ನಮಗೆ ಸತ್ತಂತೆಯೇ ಆಗಿದ್ದಾಳೆ. ನಾವು ಅವಳ ಮದುವೆಯನ್ನು ಏರ್ಪಡಿಸಿದ್ದೆವು ಆದರೆ ಅವಳು ನಮ್ಮ ಮಾತನ್ನು ಕೇಳಲು ಸಹ ಕೇಳಲಿಲ್ಲ. ಈ ರೀತಿ ನಮ್ಮನ್ನು ಬಿಟ್ಟು ನಮ್ಮ ಕುಟುಂಬಕ್ಕೆ ಅಪಖ್ಯಾತಿ ತಂದಳು ಎಂದು ಆಕೆಯ ಚಿಕ್ಕಪ್ಪ ಸೋಮನಾಥ್ ಬಿಸ್ವಾಸ್ ವರದಿಗಾರರಿಗೆ ತಿಳಿಸಿದರು.
ಪುತ್ರಿ ಜೀವಂತದ ಹೊರತು ಶ್ರಾದ್ಧ ಮಾಡಿರುವುದು ಎಷ್ಟು ಸರಿ ಅನ್ನೋದನ್ನು ಆ ಕುಟುಂಬ ಯೋಚಿಸಬೇಕೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ..(ಏಜೆನ್ಸಿಸ್)