ಚಾಮರಾಜನಗರ: ರಸ್ತೆಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ಪೋಷಕರು.

ಜಿಲ್ಲಾ ಸುದ್ದಿ

ಧರ್ಮ ಬಸವನಪುರ.

7/20/20251 min read

ಚಾಮರಾಜನಗರ : ತಾಲೂಕಿನ ಹರವೆ ಹೋಬಳಿಯ ಸಾಗಡೆ ಮತ್ತು ತಮ್ಮಡಹಳ್ಳಿ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ 10 ರಿಂದ 15 ದಿನದ ಒಳಗೆ ಇರುವ ನವಜಾತ ಹೆಣ್ಣು ಶಿಶುವನ್ನು ಪಂಚೆಯಲ್ಲಿ ಸುತ್ತಿಟ್ಟು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಹತ್ತರಿಂದ ಹದಿನೈದು ದಿನಗಳ ಹೆಣ್ಣು ಶಿಶುವನ್ನ ರಸ್ತೆ ಬದಿಯಲ್ಲಿ ಪಂಚೆಯಲ್ಲಿ ಸುತ್ತಿಟ್ಟು ಕಡುಪಾಪಿ ತಾಯಿ ಪರಾರಿಯಾಗಿದ್ದಾಳೆ, ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಸಾಗಡೆ ಗ್ರಾಮದ ರಸ್ತೆಬದಿಯಲ್ಲಿ ಪಂಚೆ ಸುತ್ತಿಟ್ಟಿದ್ದ ಮಗುವನ್ನ ಗಮನಿಸಿದ ಸ್ಥಳೀಯರು ಸಾಗಡೆ ಗ್ರಾಮದ ಪ್ರಾಥಮಿಕ ಉಪ ಕೇಂದ್ರಕ್ಕೆ ಕರೆದೊಯ್ದು ಶ್ರಶೂಷೆ ಮಾಡಿಸಿದ್ದು ಮಗುವಿನ ರಕ್ಷಣೆ ಮಾಡಲಾಗಿದೆ.

ರಸ್ತೆ ಬದಿಯಲ್ಲಿ ನವಜಾತ ಶಿಶು ಸಿಕ್ಕಿರುವ ವಿಷಯ ತಿಳಿದ ಅಂಗನವಾಡಿ ಕಾರ್ಯಕರ್ತೆ ನಾಗಮಣಿ ಎಂಬುವವರು ಆಸ್ಪತ್ರೆಗೆ ಭೇಟಿ ಕೊಟ್ಟು, ಮಗುವನ್ನು ಚಾಮರಾಜನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆ ತಂದಿದ್ದಾರೆ. ಸದ್ಯ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.