ಒಂದು ಪತ್ರದ ಜೊತೆಗೆ ಹಸುಗೂಸು ಹೆಣ್ಣು ಮಗುವನ್ನ ಫುಟ್‌ಪಾತ್‌ನಲ್ಲಿ ಬಿಟ್ಟುಹೋದ ಪೋಷಕರು.

ದೇಶ/ವಿದೇಶ

ಧರ್ಮ ಬಸವನಪುರ.

6/29/20251 min read

ಮಹಾರಾಷ್ಟ: ರಾಜ್‌ಗಢ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಪನ್ವೇಲ್‌ನ ಟಕ್ಕಾ ಗ್ರಾಮದಲ್ಲಿ ಪಾದಚಾರಿ ಮಾರ್ಗದಲ್ಲಿ ಇರಿಸಲಾಗಿದ್ದ ಬುಟ್ಟಿಯಲ್ಲಿ ಎರಡರಿಂದ ಮೂರು ದಿನಗಳ ಹೆಣ್ಣು ಮಗು ಪತ್ತೆಯಾಗಿದ್ದು, ಮಗುವಿನ ಬಳಿ ಒಂದು ಪತ್ರವೂ ದೊರಕಿದ್ದು, ಮಗುವನ್ನು ಯಾಕೆ ಇಲ್ಲಿ ಬಿಟ್ಟು ಹೋಗಿದ್ದೇವೆ ಎನ್ನುವುದಕ್ಕೆ ಪೋಷಕರು ಕಾರಣವನ್ನು ಬರೆದಿದ್ದಾರೆ ಎನ್ನಲಾಗಿದೆ.

ಶನಿವಾರ ಬೆಳಿಗ್ಗೆ ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ಜನರು ಒಂದು ಬುಟ್ಟಿಯನ್ನು ಗಮನಿಸಿದರು, ಅದರಿಂದ ಮಗುವಿನ ಅಳುವ ಶಬ್ದ ಬರುತ್ತಿತ್ತು . ಜನರು ಬುಟ್ಟಿಯನ್ನು ತೆರೆದಾಗ, ಒಳಗೆ ಹೆಣ್ಣು ಮಗು ಮಲಗಿರುವುದ್ದನ್ನ ನೋಡಿದ್ದಾರೆ. . ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸರು ತಕ್ಷಣ ಮಗುವನ್ನು ಪನ್ವೇಲ್‌ನಲ್ಲಿರುವ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಮಗುವಿನ ಸ್ಥಿತಿ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಮಗುವಿನ ಅಪರಿಚಿತ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ. ಎರಡರಿಂದ ಮೂರು ದಿನಗಳ ಹೆಣ್ಣು ಮಗುವನ್ನು ಅಲಿಬಾಗ್‌ನಲ್ಲಿರುವ ಅನಾಥಾಶ್ರಮಕ್ಕೆ ಕರೆದೊಯ್ಯಬಹುದು ಎಂದು ತಿಳಿದುಬಂದಿದೆ

ಪತ್ರದಲ್ಲಿ ಏನು ಬರೆಯಲಾಗಿದೆ ಗೊತ್ತಾ?

ಮಗುವಿನ ಬಳಿ ಒಂದು ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ಇಂಗ್ಲಿಷ್‌ನಲ್ಲಿ ಹೀಗೆ ಬರೆಯಲಾಗಿದೆ, 'ಸರ್, ದಯವಿಟ್ಟು ನಮ್ಮನ್ನು ಕ್ಷಮಿಸಿ, ನಮಗೆ ಬೇರೆ ದಾರಿ ಇರಲಿಲ್ಲ. ಅದಕ್ಕಾಗಿಯೇ ನಾವು ಮಗುವನ್ನು ತ್ಯಜಿಸುತ್ತಿದ್ದೇವೆ. ಮಗುವನ್ನು ನೋಡಿಕೊಳ್ಳಲು ನಮಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಾಮರ್ಥ್ಯವಿಲ್ಲ. ದಯವಿಟ್ಟು ಈ ವಿಷಯದಲ್ಲಿ ಯಾರನ್ನೂ ದೂರ ಬೇಡಿ. ನಾವು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ನಮ್ಮ ಮಗುವೂ ಅದೇ ಪರಿಸ್ಥಿತಿಯನ್ನು ಎದುರಿಸಬೇಕೆಂದು ನಾವು ಬಯಸುವುದಿಲ್ಲ! ದಯವಿಟ್ಟು ಈ ಮಗುವನ್ನು ಯಾರದರೂ ನೋಡಿಕೊಳ್ಳಿ, ಎಂದು ಬರೆದಯಲಾಗಿದೆ.