ಹೀಲ್ ಗೂ -ಹೀಲಿನ್ ಗೂ ವ್ಯತ್ಯಾಸ ಗೊತ್ತಾಗದೆ ರೋಗಿಗಳ ಪರದಾಟ, ನನ್ನ ರೋಗಿಗಳ ಗೊಂದಲದಿಂದ ಪೋಸ್ಟ್ ಹಾಕಿದ್ದೇನೆ - ಡಾ ಎಂ ಬಿ ಆರ್ಜನ್ ಸ್ಪಷ್ಟನೆ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

10/9/20251 min read

ದೊಡ್ಡಬಳ್ಳಾಪುರ : ನನ್ನ ಒಡೆತನದ ಹೀಲ್ ಕ್ಲಿನಿಕ್ ಸುಮಾರು 4 ವರ್ಷದಿಂದ ದೊಡ್ಡಬಳ್ಳಾಪುರದಲ್ಲಿ ಸೇವೆ ಸಲ್ಲಿಸುತ್ತಿದೆ. ನನ್ನ ಹೀಲ್ ಆಸ್ಪತ್ರೆಗೂ ಹಾಗೂ ನೂತನ ಹೀಲಿನ್ ಹಾಸ್ಪಿಟಲ್ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿರುವುದರಿಂದ ನನ್ನ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ನನ್ನ ವಾಟ್ಸಪ್ ಗ್ರೂಪಿನಲ್ಲಿ ಒಂದು ಪೋಸ್ಟನ್ನು ಹಾಕಿದ್ದೇನೆ ಅಷ್ಟೇ ಎಂದು ಹೀಲ್ ಕ್ಲಿನಿಕ್ ವೈದ್ಯ ಡಾ ಎಂ ಬಿ ಅರ್ಜುನ್ ಸ್ಪಷ್ಟನೆ ನೀಡಿದ್ದಾರೆ.

ಅವರುನಗರದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದೊಡ್ಡಬಳ್ಳಾಪುರದ ಮಗನಾಗಿ ಜನತೆಗೆ ವೈದ್ಯಕೀಯ ಸೇವೆ ಸಲ್ಲಿಸಲು ಬಂದಿದ್ದೇನೆ. ಇಲ್ಲೆ ಹುಟ್ಟಿ ಬೆಳೆದು, ಬೇರೆ ದೇಶಗಳಿಂದ ಸೇವೆ ಸಲ್ಲಿಸಲು ಆಹ್ವಾನಗಳು ಬಂದಿದ್ದರು ಸಹ ನನ್ನ ಹುಟ್ಟೂರು ಜನತೆಗೆ ನನ್ನ ಸೇವೆ ಇರಲಿ ಎಂದು ಸುಮಾರು ನಾಲ್ಕು ವರ್ಷಗಳಿಂದ ಹೀಲ್ ಆಸ್ಪತ್ರೆಯನ್ನು ತೆರೆದು ಜನರಿಗೆ ಕಡಿಮೆ ಬೆಲೆಯಲ್ಲಿ ನಾನು ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ ಎಂದರು.

ನನ್ನ ರೋಗಿಯೊಬ್ಬರು ನೀವು ಹೊಸ ಹಾಸ್ಪಿಟಲ್ ಪ್ರಾರಂಭಿಸಿದ್ದೀರಾ ಎಂದು ಕೇಳಿದಾಗ ನಾನು ನನ್ನ ಸಾಮಾಜಿಕ ಜಾಲತಾಣದಲ್ಲಿ ಒಂದು ಸ್ಪಷ್ಟ ಸಂದೇಶದ ಪೋಸ್ಟ್ ಮಾಡಬೇಕಾಯಿತು. ಹಿಂದೆಯೂ ಸಹ ನನ್ನ ಹೆಸರು ದುರ್ಬಳಕೆ ಆಗಿತ್ತು ಆದ್ದರಿಂದ ನನ್ನ ವಾಟ್ಸಪ್ ಗ್ರೂಪಿನಲ್ಲಿ ನನ್ನ ರೋಗಿಗಳಿಗೆ ಮತ್ತು ನನಗೆ ಗೊತ್ತಿರುವ ಡಾಕ್ಟರ್ ಗಳಿಗೆ ರೀತಿಯ ಒಂದು ಮೆಸೇಜನ್ನು ಹಾಕಿದ್ದೇನೆ. ಅದರ ಉದ್ದೇಶ ಯಾರಿಗೂ ಅವಮಾನ ಮಾಡಲು ಅಲ್ಲ ನನ್ನ ರೋಗಿಗಳಿಗೆ ಒಂದು ಕ್ಲಾರಿಫಿಕೇಶನ್ ಕೊಡುವ ಉದ್ದೇಶದಿಂದ ಒಂದು ಪೋಸ್ಟ್ ಹಾಕಿದೆ, ನಂತರ ಸಂಜೆಗೆ ಅದು ನಮ್ಮ ಡಾ ವೆಂಕಟೇಶ್ ಪ್ರಸಾದ್ ಅವರ ಹಾಸ್ಪಿಟಲ್ ಎಂದು ತಿಳಿದುಬಂದಿತು, ಅಷ್ಟರಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿ ಹೋಗಿತ್ತು, ನಾನು ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ಕೊನೆಗೆ ನನ್ನ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ಒಂದು ದೂರು ಸಹ ನೀಡಲಾಗಿತ್ತು. ಅದಕ್ಕಾಗಿ ನಾನು ಠಾಣೆಗೆ ಹೋಗಿ ಮಾಹಿತಿ ಸಹ ಕೊಟ್ಟು ಬಂದಿದ್ದೇನೆ.

ನಾನು ಯಾವುದೇ ವ್ಯಕ್ತಿಗಾಗಲಿ ಒಂದು ಸಂಸ್ಥೆ ಗೆ ಅವಮಾನ ಮಾಡುವ ಉದ್ದೇಶ ನನ್ನಲ್ಲಿಲ್ಲ. ನನಗೂ ಸಹ ತಿಳಿದಿದೆ ಒಂದು ಸಂಸ್ಥೆಯನ್ನು ಕಟ್ಟಬೇಕಾದರೆ ಅದರ ಶ್ರಮ ಎಷ್ಟು ಎಂದು ನಾವು ಎಲ್ಲಾ ವೈದ್ಯರು ಒಂದೇ ಎಲ್ಲರೂ ಒಟ್ಟಾಗಿ ಬೆಳೆಯೋಣ ಎಂದು ಮೂಲಕ ಹೇಳಲು ಇಷ್ಟಪಡುತ್ತೇನೆ ಎಂದರು.

ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group https://chat.whatsapp.com/Fj6L4Eak7N994zl2QHSpHK