Petrol Bunk Theft: ಪೆಟ್ರೋಲ್ ಬಂಕ್ ಕಚೇರಿಯಲ್ಲಿ ಕಳ್ಳತನ, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆ

ಕ್ರೈಮ್

ರಾಘವೇಂದ್ರ ಹೆಚ್​​.ಎ

4/10/20251 min read

ಆನೇಕಲ್: ತಾಲೂಕಿನ ದೊಮ್ಮಸಂದ್ರದ ಪೆಟ್ರೋಲ್ ಬಂಕ್ ಕಚೇರಿಯಲ್ಲಿ ಕಳ್ಳನೊಬ್ಬ ನುಗ್ಗಿ ಹಣ ದೋಚಿ ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ 1.30ರ ಸುಮಾರಿಗೆ ನಡೆದಿದೆ. ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸರ್ಜಾಪುರ-ಬೆಂಗಳೂರು ರಸ್ತೆಯಲ್ಲಿರುವ ಈ ಪೆಟ್ರೋಲ್ ಬಂಕ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಸುಮಾರು 1.30ರ ಸುಮಾರಿಗೆ ಕಚೇರಿಯಲ್ಲಿ ರಾತ್ರಿ ಪಾಳಿಯಲ್ಲಿ ಯಾರು ಇಲ್ಲದಿದ್ದಾಗ ಪೆಟ್ರೋಲ್ ಬಂಕ್ ಕಚೇರಿಗೆ ಅಪರಿಚಿತ ಕಳ್ಳತನ ಮಾಡಿದ್ದಾನೆ.

ತಲೆಗೆ ಹೆಲ್ಮೆಟ್, ಮುಖಕ್ಕೆ ಮಾಸ್ಕ್, ಜರ್ಕಿನ್, ಕೈಯಲ್ಲೊಂದು ಛತ್ರಿಯನ್ನು ಹಿಡಿದು ಒಳ ನುಗ್ಗಿದ್ದಾನೆ, ಬಳಿಕ ಕಚೇರಿಯಲ್ಲಿನ ಟೇಬಲ್ ಡ್ರಾವರ್ನಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾನೆ. ಸುಮಾರು 5 ನಿಮಿಷಗಳ ಕಾಲ ಕಳ್ಳತನ ನಡೆಸಿ ಕೊನೆಗೆ ಹಣ ದೋಚಿ ಪರಾರಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿ ಸಿಸಿಟಿವಿ ದೃಶ್ಯಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ಪೆಟ್ರೋಲ್ ಬಂಕ್ ಮಾಲೀಕರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ