ಪ್ರಧಾನಿ ಮೋದಿ ಹುಟ್ಟುಹಬ್ಬ: ಕಸ ಗೂಡಿಸಿ, ಸಸಿ ನೆಟ್ಟ ಶಾಸಕ ಭೈರತಿ ಬಸವರಾಜ್.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನಲೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೇಡ್ ವಿತರಣೆ, ಗೋ ಪೂಜೆ,ಸರ್ಕಾರಿ ಕಾಲೇಜು ಆವರಣದಲ್ಲಿ ಸಸಿ ನೆಟ್ಟು , ಸಂತೆಯಲ್ಲಿ ಕಸ ಗೂಡಿಸುವ ಮೂಲಕ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಶಾಸಕ ಬೈರತಿ ಬಸವರಾಜ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹನ್ನೊಂದು ವರ್ಷಗಳಲ್ಲಿ ಅನೇಕ ಜನಪರ ಯೋಜನೆ ಜಾರಿಗೆ ತರುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ, ವಿಶ್ವದಲ್ಲೇ ನಮ್ಮ ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಒಂದು ದಿನ ವಿಶ್ರಮಿಸದೆ ಸದಾ ಕಾಲ ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ಮೋದಿ ಅವರ ಜನ್ಮದಿನವನ್ನು ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಎಂದು ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ತಿಳಿಸಿದರು.
ಇಂದಿನಿಂದ ಐದಿನೈದು ದಿನ ಕ್ಷೇತ್ರದಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೆ.ಆರ್.ಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೇಡ್ ವಿತರಣೆ ಮಾಡುವುದರ ಮೂಲಕ ಪ್ರಾರಂಭ ಮಾಡಿ,ಕೋಟೆ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದ ಮುಂಭಾಗ ಗೋ ಮಾತೆಯ ಪೂಜೆಯನ್ನು ನೆರವೇರಿಸಲಾಯಿತು. ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು, ನಂತರ ಕೆ.ಆರ್.ಪುರದ ಸಂತೆಯಲ್ಲಿ ಪೌರ ಕಾರ್ಮಿಕರೊಂದಿಗೆ ಕಸ ಗುಡಿಸುವುದರ ಮುಖಾಂತರ ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು, ಹಾಗೂ ಕೆ.ಆರ್.ಪುರ ಬಿ.ಬಿ.ಎಂ.ಪಿ. ಹತ್ತಿರ. ಪೌರ ಕಾರ್ಮಿಕರಿಗೆ ವಸ್ತ್ರ ವಿತರಣೆ ಮಾಡಿ, ಉಪಹಾರವನ್ನು ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಮುನೇಗೌಡ ಮುಖಂಡರಾದ ಜಯಪ್ರಕಾಶ್, ಅಂತೋಣಿ ಸ್ವಾಮಿ, ನಾಗೇನಹಳ್ಳಿ ಲೋಕೇಶ್, ವಿ.ಸುರೇಶ್, ರಮೇಶ್, ಎಸ್.ಜಿ.ನಾಗರಾಜ್, ಶ್ರೀಕಾಂತ್, ಅಂತೋಣಿಸ್ವಾಮಿ, ಮಾರ್ಕೇಟ್ ರಮೇಶ್, ಸಿದ್ದಲಿಂಗಯ್ಯ, ಭಟ್ಟರಹಳ್ಳಿ ಮಂಜುನಾಥ್, ಶಿವಪ್ಪ, ರಾಮ್ ಲಕ್ಷ್ಮಣ್ , ಪರಿಸರ ಶ್ರೀರಾಮ್ ಮತ್ತಿತರರು ಇದ್ದರು.