ದುರ್ವಾಸನೆ ಜಾಡು ಹಿಡಿದ ಪೊಲೀಸರಿಗೆ ಸಿಕ್ತು ಟೆಕ್ಕಿಯ ಶವ
ಕ್ರೈಮ್ಸ್ಥಳೀಯ ಸುದ್ದಿ


ಬಸವೇಶ್ವರ ನಗರ: ಕೊಳೆತ ಸ್ಥಿತಿಯಲ್ಲಿ ಟೆಕ್ಕಿಯ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಮಂಜುನಾಥ್ ನಗರದ 3ನೇ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಜರುಗಿದೆ.
ಭಾಗಶಃ ಕೊಳೆತು ದಯರ್ವಾಸನೆ ಬರುತ್ತಿದ್ದ ವ್ಯಕ್ತಿ ಹೆಸರು ಯುವರಾಜ್ (48). ಕಳೆದ ಹದಿನೈದು ದಿನಗಳಿಂದ ಶವ ಕೊಳೆತು ನಾರುತ್ತಿತ್ತು.
ಇಂದು ಬಸವೇಶ್ವರ ನಗರ ಪೊಲೀಸರು ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಮಂಜುನಾಥ್ ನಗರದ 3ನೇ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ಕಳೆದ ಹದಿನೈದು ದಿನಗಳಿಂದ ಶವ ಕೊಳೆತು ನಾರುತ್ತಿತ್ತು. ಮುಖಕ್ಕೆ ಮಾಸ್ಕ್ ಹಾಕಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಏರಿಯಾದ ಜನರು ಮಾತ್ರ ಅಟ್ಟದ ಮೇಲೆಲ್ಲೋ, ಮೋರಿಯಲ್ಲೋ, ಹೆಗ್ಗಣ ಸತ್ತು ಬಿದ್ದಿರಬೇಕೆಂದು ದಿನವೂ ಮೋರಿಗೆ ನೀರು ಸುರಿಯುತ್ತಿದ್ದರಂತೆ.
ಬಳಿಕ ಮನೆಯೊಂದರಿಂದ ದುರ್ವಾಸನೆ ಬರ್ತಿದೆ ಎಂದು ಗಮನಿಸಿದ ಸ್ಥಳೀಯರು, ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಸಹಾಯ ಪಡೆದು ಬಂದು ನೋಡಿದ ಪೊಲೀಸರಿಗೆ ಕೋಣೆಯಲ್ಲಿ ಹಾಸಿಗೆ ಮೇಲೆ ಟೆಕ್ಕಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅವಿವಾಹಿತರಾಗಿದ್ದ ಟೆಕ್ಕಿ, ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅನುಮಾನಾಸ್ಪದ ಸಾವಿನ ಹಿನ್ನಲೆ ಕೇಸ್ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, ಮೃತ ಯುವರಾಜ್ ಸೋದರಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರೆಸಿದ್ದಾರೆ.