ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಪೊಲೀಸರಿಂದ ಅಡ್ಡಿ ದಲಿತಪರ ಸಂಘಟನೆಗಳಿಂದ ಠಾಣೆ ಮುತ್ತಿಗೆ .

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

7/17/20251 min read

ಮಹದೇವಪುರ: ಡಾ ಬಿಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಸ್ಥಾಪನೆಗೆ ಪೊಲೀಸ್ ಇಲಾಖೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿ ದಲಿತ ಪರ ಸಂಘಟನೆಗಳು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ ಬೆಂಗಳೂರಿನ ವರ್ತೂರು ಪೋಲಿಸ್ ಠಾಣೆನಲ್ಲಿ ನಡೆದಿದೆ .

ಈ ಕುರಿತು ಮಾತನಾಡಿದ ಬಿಎಸ್ಎಸ್ ರಾಷ್ಟ್ರಿಯ ಅಧ್ಯಕ್ಷ ಹೂಡಿ ರಾಮಚಂದ್ರ ಅವರು ವರ್ತೂರಿನ ಗಾಂಧಿ ವೃತದಲ್ಲಿ ಈ ಹಿಂದೆಯೇ ಅಂಬೇಡ್ಕರ್ ಅವರ ಭಾವಚಿತ್ರ ಇರುವ ಫೋಟೋ ಇದ್ದು ಅದು ಹಾಳಾದ ಕಾರಣ ಅದೇ ಜಾಗದಲ್ಲಿ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಲು ಗ್ರಾಮಸ್ಥರ ಅನುಮತಿ ಪಡೆದು ಎಲ್ಲರೂ ಒಪ್ಪಿಗೆ ಮೇರೆಗೆ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಕೈ ಹಾಕಿದ್ದೇವೆ , ಆದರೆ ಕೆಲವರ ಒತ್ತಡಕ್ಕೆ ಪೊಲೀಸರು ಮಣಿದು ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣ ಮಾಡಲು ಅಡ್ಡಿ ಪಡಿಸುತ್ತಿದ್ದಾರೆ .ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸುವಂತೆ ದಲಿತ ಪರ ನಾಯಕರು , ಕನ್ನಡ ಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳು ಸೇರಿ ಪೊಲೀಸರಿಗೆ ಮನವಿ ಪತ್ರವನ್ನು ನೀಡಿದ್ದೇವೆ ಎಂದರು‌ .