Power Cut : ದೊಡ್ಡಬಳ್ಳಾಪುರ ನಗರದ ವಿವಿಧೆಡೆ ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಅಪೇರಲ್ ಪಾರ್ಕ್ ಉಪ ವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುವ F11-ರೈಲ್ವೇ ಸ್ಟೇಷನ್ ಫೀಡರ್‌ನ ಮಾರ್ಗದಲ್ಲಿ ವಾಹಕ ಬದಲಾವಣೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಇಂದು (ಏ. 08) ಬೆಳಿಗ್ಗೆ 10 ಗಂಟೆ ಇಂದ ಸಂಜೆ 06 ಗಂಟೆವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾಹಿಯಂತೆ ನಗರದ ಸೌಟ್‌ಕ್ಯಾಂಪ್ ರಸ್ತೆ, ರೈಲ್ವೆ ನಿಲ್ದಾಣ, ಕೆಂಪೇಗೌಡ ನಗರ, ರೈಲ್ವೆ ನಿಲ್ದಾಣ ಸರ್ಕಲ್, ಎಂ.ಎ.ಪ್ರಕಾಶ್ ಬಡಾವಣೆ, ಎಂ.ಜಿ.ಗಾರ್ಡನ್, ಶ್ರೀನಗರ, ಖಾಸ್‌ಬಾಗ್, ಚಂದ್ರಶೇಖರಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯ ಉಂಟಾಗಲಿದೆ.

