Power Cut: ದೊಡ್ಡಬಳ್ಳಾಪುರದಲ್ಲಿ ಇಂದು ವಿದ್ಯುತ್ ಸಂಪರ್ಕ ಕಡಿತ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/21/20251 min read

ದೊಡ್ಡಬಳ್ಳಾಪುರ ನಗರದ ಹಲವೆಡೆ ಇಂದು ವಿದ್ಯುತ್​ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಎಂದು ನಗರ ಉಪ ವಿಭಾಗದ ಎಇಇ ವಿನಯ್​ ಕುಮಾರ್​ ಅವರು ಮಾಹಿತಿ ನೀಡಿದ್ದಾರೆ.

ದೊಡ್ಡಬಳ್ಳಾಪುರ ನಗರದಲ್ಲಿ ದಿನಾಂಕ:-21/04/2025 ರಂದು 66/11ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F07-Local-1 ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ ಈ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಲಾಗಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಜಾಲಪ್ಪ ಕಾಲೇಜ್ ರಸ್ತೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳು.