Power Cut: ದೊಡ್ಡಬಳ್ಳಾಪುರ ನಗರದಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ ನಗರದ ಹಲವೆಡೆ ಇಂದು(ಏ.26) ರಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಎಂದು ನಗರ ಉಪ ವಿಭಾಗದ ಎಇಇ ವಿನಯ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ದಿನಾಂಕ:-26/04/2025 ರಂದು 66/11ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F07-Local-2 ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ ಈ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಲಾಗಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ದೊಡ್ಡಬಳ್ಳಾಪುರ ಹಳೆ ಬಸ್ ನಿಲ್ದಾಣ, ಹೇಮಾವತಿ ಪೇಟೆ, ಸಿನಿಮಾ ರಸ್ತೆ, ದೇವಾಂಗ ಪೇಟೆ, ರೋಜಿಪುರ, ಕೋರ್ಟ್ ರಸ್ತೆ, ಚಿಕ್ಕಪೇಟೆ, ಜೆ.ಸಿ ಸರ್ಕಲ್, ದರ್ಜಿಪೇಟೆ, ಬೆಸ್ತರಪೇಟೆ, ಮಾರುತಿ ನಗರ, ಶೇಣಿಗರ ಪೇಟೆ, ತಾಲ್ಲೂಕು ಆಫೀಸ್ ರಸ್ತೆ, ಪೋಸ್ಟ್ ಆಫೀಸ್, ಡೀಕ್ರಾಸ್, ಮುತ್ಸಂದ್ರ, ಸರ್ಕಾರಿ ಆಸ್ಪತ್ರೆ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯ ಉಂಟಾಗಲಿದೆ.