ದೊಡ್ಡಬಳ್ಳಾಪುರ ನಗರದಲ್ಲಿ ಆ.10ರಂದು ವಿದ್ಯುತ್ ಸ್ಥಗಿತ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ ನಗರ ವಿವಿಧ ವಾರ್ಡ್ಗಳಲ್ಲಿ ಆ.10 ರಂದು ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಕೆಐಎಡಿಬಿ ಉಪವಿಭಾಗಾದ ವಿದ್ಯುತ್ ಉಪಕೇಂದ್ರದಿಂಧ ಹೊರಹೊಮ್ಮುವ ಎಫ್02-ಬಿರ್ಲಾ ಸೂಪರ್ ಫೀಡರ್ನಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುತ್ತಿರುವುದರಿಂದ ಈ ಮಾರ್ಗದಲ್ಲಿ ಆ.10ರಂದು ಬೆಳಗ್ಗೆ 10 ರಿಂದ ಸಂಜೆ 6ಗಂಟೆಯ ವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:
ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯರಸ್ತೆ, ಸಂಜಯ್ನಗರ, ಭುವನೇಶ್ವರಿ ನಗರ, ಚೈತನ್ಯನಗರ, ತೇರಿನ ಬೀದಿ, ಗಂಗಪ್ಪ ಸರ್ಕಲ್, ಕೆಸಿಪಿ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪ್ರಜಾ ಭಾರತ್ ನ್ಯೂಸ್ ವೆಬ್ ಪೋರ್ಟಲ್ ವಾಟ್ಸಪ್ ಗ್ರೂಪ್ ಸೇರಲು 👇👇Follow this link to join my WhatsApp group: https://chat.whatsapp.com/Fj6L4Eak7N994zl2QHSpHK

