ದೊಡ್ಡಬಳ್ಳಾಪುರದಲ್ಲಿ ಇಂದು ವಿದ್ಯುತ್ ಸಂಪರ್ಕ ಕಡಿತ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ಇಂದು ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಕೆಐಎಡಿಬಿ ಉಪ ವಿದ್ಯುತ್ಬ ಕೇಂದ್ರದಿಂದ ಹೊರಹೊಮ್ಮುವ Birla Super, F08-Town and F22-Karenahalli ಕಾಮಗಾರಿ ನಡೆಯುವುದರಿಂದ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಲಾಗಿದೆ.
ವಿದ್ಯುತ್ ಆಡಚಣೆಯಾಗುವ ಪ್ರದೇಶಗಳು:
ದೊಡ್ಡಬಳ್ಳಾಪುರ ನಗರದ ಖಾಸ್‌ಬಾಗ್, ದರ್ಗಾಪುರ, ಬ್ರಾಹ್ಮಣರ ಬೀದಿಯ ಬೆಳ್ಳಿ ಗಣೇಶ ಪರಿವರ್ತಕ, ವೀರಾಪುರ, ವೀವೆಕಾನಂದ ನಗರ, ತಿಪ್ಪಾಪುರ, ಭುವನೇಶ್ವರಿ ನಗರ, ತೇರಿನ ಬೀದಿ, ರಂಗಪ್ಪ ಸರ್ಕಲ್, ಕುಚ್ಚಪ್ಪರಪೇಟೆ, ಕೊಂಗಾಡಿಯಪ್ಪ ಮುಖ್ಯ ರಸ್ತೆ, ಚೌಡೇಶ್ವರಿ ಗುಡಿ ಬೀದಿ, ತೂಬಗೆರೆ ಪೇಟೆ, ಕಲಾಸಿಪಾಳ್ಯ, ಸಂಜಯನಗರ, ಚೈತನ್ಯನಗರ, ವಿದ್ಯಾನಗರ, ಕೆಸಿಪಿ ಸರ್ಕಲ್, ವೀರಭದ್ರನಪಾಳ್ಯ, ಗಾಂಧಿನಗರ, ಕೆರೆ ಬಾಗಿಲು, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯವಾಗಲಿದೆ.