ನಾಳೆ ದೊಡ್ಡಬಳ್ಳಾಪುರ ನಗರದ ಈ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ!
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ ನಗರದ ಹಲವೆಡೆ ನಾಳೆ(ಏ.28) ರಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ ಎಂದು ನಗರ ಉಪ ವಿಭಾಗದ ಎಇಇ ವಿನಯ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ದಿನಾಂಕ:-28/04/2025 ರಂದು 220/66/11ಕೆವಿ ಕೆಐಎಡಿಬಿ ವಿದ್ಯುತ್ ಕಾಮಗಾರಿ ನಡೆಯುವುದರಿಂದ ಸದರಿ F02-Birla Super, F08-Town and F22-Karenahalli ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ ಈ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಲಾಗಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ದೊಡ್ಡಬಳ್ಳಾಪುರ ಖಾಸ್ ಭಾಗ್, ದರ್ಗಾಪುರ, ಬ್ರಾಹ್ಮಣರ ಬೀದಿ, ವೀರಾಪುರ, ವಿವೇಕಾನಂದ ನಗರ, ತಿಪ್ಪಾಪುರ, ಭುವನೇಶ್ವರಿ ನಗರ, ತೇರಿನ ಬೀದಿ, ರಂಗಪ್ಪ ಸರ್ಕಲ್, ಕುಚ್ಚಪ್ಪನ ಪೇಟೆ, ಕೊಂಗಾಡಿಯಪ್ಪ ಮುಖ್ಯರಸ್ತೆ, ಚೌಡೇಶ್ವರಿ ಗುಡಿಬೀದಿ, ತೂಬಗೆರೆ ಪೇಟೆ, ಕಲಾಸಿಪಾಳ್ಯ, ಸಂಜಯ್ನಗರ, ವಿದ್ಯಾನಗರ, ಕೆಸಿಪಿ ಸರ್ಕಲ್, ವೀರಭ್ರನಪಾಳ್ಯ, ಗಾಂಧೀನಗರ, ಕೆರೆ ಬಾಗಿಲು, ಹಾಗು ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಗಲಿದೆ.

